Breaking NewsLatestರಾಷ್ಟ್ರೀಯಸುದ್ದಿ

ರೈತವಿರೋಧಿ ಬಿಜೆಪಿ ನೇತೃತ್ವದ ಸರ್ಕಾರ ತೊಲಗಿಸಲು ಪ್ರತಿಭಟನೆ; ರಾಕೇಶ್‌ ಟಿಕಾಯತ್‌ ಎಚ್ಚರಿಕೆ

ಗಾಝಿಯಾಬಾದ್ : ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿ, ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಾತ್ಮಕವಾಗಿ ಒದಗಿಸುವ ಕಾಯ್ದೆ ಜಾರಿಗೆ ತರದಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದಿಂದ ತೊಲಗಿಸಲು ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಭಾರತೀಯ ಕಿಸಾನ್‌ ಯೂನಿಯನ್ ವಕ್ತಾರ ರಾಕೇಶ್‌ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಉತ್ತರಾಖಂಡ, ಉತ್ತರಪ್ರದೇಶ, ಹಿಮಾಚಲಪ್ರದೇಶ, ಹರ್ಯಾಣದ ಬಿಕೆಯು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ರೈತರು ಯಾವುದೇ ರಾಜಕೀಯ ಪಕ್ಷಗಳ ವಿರೋಧಿಗಳಲ್ಲ. ಮೊದಲು ರೈತಪರವಾಗಿರುತ್ತೇವೆಂದು ಭರವಸೆ ಕೊಟ್ಟು ಚುನಾಯಿತರಾದವರು ರೈತ ವಿರೋಧಿಗಳಾಗಿ ಅಧಿಕಾರದಲ್ಲಿ ಮುಂದುವರಿಯುವ ಯತ್ನದಲ್ಲಿದ್ದಾರೆ. ಇದು ಪ್ರತಿಯೊಬ್ಬ ರೈತರಿಗೂ ಮನವರಿಕೆಯಾಗಲಿದೆ. ಬಿಜೆಪಿಯ ನೈಜ ಬಣ್ಣವನ್ನು ಬಹಿರಂಗಪಡಿಸಲಿದ್ದೇವೆ. ಮುಂದಿನ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button