Breaking NewsLatestಮೆಟ್ರೋರಾಜ್ಯ

ರಾಜ್ಯದ ಇಬ್ಬರು ಪೋಲಿಸ್ ಅಧಿಕಾರಿಗಳಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ; 19 ಪೋಲಿಸರಿಗೆ ಪೋಲಿಸ್ ಸೇವಾ ಪದಕ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯದ ಇಬ್ಬರು ಪೋಲಿಸ್ (ಎಡಿಜಿಪಿ) ಅಧಿಕಾರಿಗಳಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಮತ್ತು 19 ಪೋಲಿಸರಿಗೆ ಪೋಲಿಸ್ ಸೇವಾ ಪದಕ ಒಲಿದು ಬಂದಿದೆ.

ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ ಆರ್ಥಿಕ ಅಪರಾಧಗಳ ಎಡಿಜಿಪಿ ಉಮೇಶ್ ಕುಮಾರ್, ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅರುಣ್ ಚಕ್ರವರ್ತಿ ಅವರಿಗೆ ಒಲಿದು ಬಂದಿದೆ.

ಶ್ಲಾಘನೀಯ ಸೇವಾ ಪದಕಕ್ಕೆ ಬೆಂಗಳೂರಿನ ಕೆಎಸ್‍ಆರ್‍ಪಿಯ 3ನೇ ಬೆಟಾಲಿಯನ್‍ನ ಕಮಾಂಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್, ಮಲ್ಲೇಶ್ವರ ಉಪವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು, ಚಿಕ್ಕಪೇಟೆ ಉಪವಿಭಾಗದ ಎಸಿಪಿ ರವಿ.ಪಿ, ರಾಜ್ಯ ಗುಪ್ತವಾರ್ತೆ ವಿಭಾಗದ ಡಿವೈಎಸ್ಪಿ ನವೀನ್ ಕುಲಕರ್ಣಿ, ದಕ್ಷಿಣ ವಿಭಾಗದ ತಲ್ಲಘಟ್ಟಪುರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಜಿ.ಸಿದ್ದರಾಜು, ಎಸಿಬಿ ಇನ್‍ಸ್ಪೆಕ್ಟರ್ ಎನ್.ಜೆ.ದಯಾನಂದ್, ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರಗೌಡ ಪಾಟೀಲ್, ಬೆಳಗಾವಿಯ ಕೆಎಸ್‍ಆರ್‍ಪಿ ತರಬೇತಿ ಶಾಲೆಯ ವಿಶೇಷ ಆರ್‍ಎಸ್‍ಐ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಮಹಿಳಾ ಪಿಎಸ್‍ಐ ಎಸ್.ಇ.ಗೀತಾ, ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್‍ನ ವಿಶೇಷ ಎಆರ್‍ಎಸ್‍ಐ ಬಿ.ಎಸ್.ಗೋವರ್ಧನರಾವ್, ಮಂಗಳೂರು ನಗರದ ಸೈಬರ್ ಅಪರಾಧಗಳ ಠಾಣೆಯ ಎಎಸ್‍ಐ ಮೋಹನ್, ಬೆಂಗಳೂರಿನ ವೈರ್‍ಲೆಸ್ ವಿಭಾಗದ ಎಎಸ್‍ಐ ರಾಮನಾಯಕ್, ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಮೊಹಮ್ಮದ್ ಮುನಾವರ್ ಪಾಷಾ, ಬೆಂಗಳೂರಿನ ಕೆಎಸ್‍ಆರ್‍ಪಿ 4ನೇ ಬೆಟಾಲಿಯನ್‍ನ ವಿಶೇಷ ಆರ್‍ಎಚ್‍ಸಿ ಎಸ್.ಪಿ.ಕೆರುಟಗಿ, ಬಳ್ಳಾರಿ ಡಿಎಆರ್‍ನ ಎಎಚ್‍ಸಿ ಬಿ.ಎಸ್.ದಾದಾ ಅಮೀರ್, ಯಲಹಂಕ ಎಪಿಟಿಎಸ್‍ನ ಎಎಚ್‍ಸಿ ವಿ.ಸೋಮಶೇಖರ್, ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್‍ಸಿ ಆರ್.ಕುಮಾರ್, ಬೆಂಗಳೂರು ಕೆಎಸ್‍ಆರ್‍ಪಿ 3ನೇ ಬೆಟಾಲಿಯನ್ ವಿಶೇಷ ಆರ್‍ಎಚ್‍ಸಿ ಸಯ್ಯದ್ ಅಬ್ದುಲ್ ಖಾದರ್, ಹುಬ್ಬಳ್ಳಿ ಧಾರವಾಡದ ಸಿಸಿಆರ್‍ಬಿಯ ಸಿಎಚ್‍ಸಿ ಗೋಪಾಲ ದೇವೇಂದ್ರಪ್ಪ ಕೊಟಬಾಗಿ ಅವರಿಗೆ ಪ್ರಶಸ್ತಿ ಸಂದಿವೆ.

ಮಂಗಳೂರಿನ ಸಿಐಎಸ್‍ಎಫ್‍ನ ಸಹಾಯಕ ಕಮಾಂಡೆಂಟ್ ಸಂತೋಷ್‍ಕುಮಾರ್.ಪಿ ಅವರಿಗೂ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪಡೆಯ ವಿಶೇಷ ಪದಕಕ್ಕೆ ಕರ್ನಾಟಕದ ಗೃಹ ರಕ್ಷಕ ದಳದ ಕಮಾಂಡೆಂಟ್ ಅಜ್ಮಲ್ ಸಾಕೀಬ್ ಮೊಹಮ್ಮದ್, ಫ್ಲಟೂನ್ ಕಮಾಂಡರ್‍ಗಳಾದ ಸುಜೇಂದ್ರ ಕುಮಾರ್ ನಾರೇಪ್ಪ .ಸಿ, ಜಗನ್ನಾಥ್ ಕರಿಯಪ್ಪ, ವಿಶೇಷ ಫ್ಲಟೂನ್ ಕಮಾಂಡರ್ ನಿಂಬಣ್ಣಗೌಡ, ನಾಗರಿಕ ರಕ್ಷಣಾ ಪಡೆಯ ವಿಭಾಗೀಯ ವಾರ್ಡನ್‍ಗಳಾದ ರಾಜೇಶ್ ಶಂಕರನಾರಾಯಣ ಮಾಕಂ, ಮೋಹನ್ ಕೃಷ್ಣಪ್ಪ ಅವರು ಭಾಜನರಾಗಿದ್ದಾರೆ.

ಅಗ್ನಿಶಾಮಕ ದಳದ ಫೈರ್ ಸ್ಟೇಷನ್ ಆಫೀಸರ್ ಬಿ.ಪಿ.ಕೃಷ್ಣಪ್ಪ, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಿದಾನಂದ ದುಂಡಪ್ಪ ಮಾನೆ, ಮುಂಚೂಣಿ ಅಗ್ನಿಶಾಮಕ ಸಿಬ್ಬಂದಿ ಮೀರ್ ಮೊಹಮ್ಮದ್ ಗೌಸ್, ಚಾಲಕರುಗಳಾದ ಕೆ.ಆರ್.ಮಂಜುನಾಥ್, ಪ್ರಶಾಂತ್‍ಕುಮಾರ್ ಅವರುಗಳು ರಾಷ್ಟ್ರಪತಿ ಅವರ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button