ಇಂದು, ನಾಳೆ ಪವರ್ ಕಟ್ ಬೆಂಗಳೂರಿನ ಹಲವು ಏರಿಯಾಗಳಲ್ಲಿ

ಬೆಂಗಳೂರು: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ.
ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿರುವುದರಿಂದ ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಮತ್ತು ನಾಳೆ (ಬುಧವಾರ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನಲ್ಲಿ ಪವರ್ ಕಟ್ ಇರಲಿದೆ. ಕನಕಪುರ, ರಾಮನಗರ ಮತ್ತು ತಿಪಟೂರು ಬೆಸ್ಕಾಂ ವಿಭಾಗಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ. ಕನಕಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಇಗ್ಗಲೂರು ಮತ್ತು ಸುತ್ತಮುತ್ತಲಿನ ಗ್ರಾಮಗಳು, ಬೆಂಕಿಕೆರೆ, ಮಾದಾಪುರ, ಹೊನ್ನೆಬಾಗಿ, ಬೆನಕನಹಳ್ಳಿ, ಹೆಬ್ಬಲಗೆರೆ, ಎನ್‌ಎಸ್‌ಟಿ ಕಾವಲು, ಮಲ್ಲಾಡಿಹಳ್ಳಿ ಮತ್ತು ಹೊಸದುರ್ಗ ಸುತ್ತಮುತ್ತಲಿನ ಪ್ರದೇಶ, ಬಿದರಗದ್ದೆ, ಹೊಳೆಮಾದಾಪುರ, ಕಮ್ಮರಗಟ್ಟೆ, ಗೋವಿನಕೋವಿ, ಆವರಗೆ, ಆವರಗೆ, ಆನಗೋಡು, ಅತ್ತಿಗೆರೆ, ಮಾಯಕೊಂಡ, ಸರಸ್ವತಿ ಲೇಔಟ್, ಮಲೆಬೆನ್ನೂರು ಹೋಬಳಿ ಸುತ್ತಮುತ್ತಲಿನ ಪ್ರದೇಶಗಳು, ಹಿರಿಯೂರು, ನಗರ ಮತ್ತು ಗ್ರಾಮೀಣ ಪ್ರದೇಶಗಳಾದ ಆದಿವಾಳ, ಲಕ್ಕವನಹಳ್ಳಿ, ತೋಟಗಾರಿಕಾ ಕಾಲೇಜು, ಹಬೀಬ್ ಮತ್ತು ನಂದಾ ಫೀಡ್ಸ್ ಕಾರ್ಖಾನೆ ಪ್ರದೇಶದಲ್ಲಿ ಇಂದು ಪವರ್ ಕಟ್ ಇರಲಿದೆ.
