Breaking NewsLatestರಾಷ್ಟ್ರೀಯಸುದ್ದಿ
ಇಸ್ರೇಲಿ ಕಂಪನಿಯಿಂದ ಭಾರತದ ಪ್ರಮುಖರ ಫೋನ್ ಕದ್ದಾಲಿಕೆ; ಸುಬ್ರಮಣಿಯನ್ ಸ್ವಾಮಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಕ್ಯಾಬಿನೆಟ್ ಸಚಿವರು, ಆರ್ಎಸ್ಎಸ್ ನಾಯಕರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಪತ್ರಕರ್ತರ ಫೋನ್ ಕದ್ದಾಲಿಕೆಯಲ್ಲಿ ಇಸ್ರೇಲ್ ಕಂಪನಿಯೊಂದು ನಿರತವಾಗಿದೆ. ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ತಯಾರಿಸುತ್ತಿವೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಫೋನ್ ಟ್ಯಾಪ್ ಮಾಡಲೆಂದು ಇಸ್ರೇಲಿ ಸಂಸ್ಥೆ ಪೆಗಾಸಸ್ ನೇಮಕ ಮಾಡಿದ್ದು, ಪ್ರತಿಷ್ಠಿತ ಮಾಧ್ಯಮಗಳಾದ ವಾಷಿಂಗ್ಟನ್ ಪೋಸ್ಟ್, ಲಂಡನ್ ಗಾರ್ಡಿಯನ್ ವರದಿ ಪ್ರಕಟಿಸಲಿದೆ ಎಂಬ ವದಂತಿ ಹರಡಿದೆ, ಒಂದುವೇಳೆ ವರದಿಯಾದಲ್ಲಿ ನಾನು ಪಟ್ಟಿ ಪ್ರಕಟಿಸುತ್ತೇನೆ ಎಂದು ಟ್ವೀಟಿಸಿದ್ದಾರೆ.
ಸತ್ಯಾಂಶವನ್ನು ಪ್ರಸ್ತಾಪಿಸಬೇಕಾದ ಅವಶ್ಯಕತೆಯಿದೆ. 2ಜಿ, ಏರ್ಸೆಲ್, ಮ್ಯಾಕ್ಸಿಸ್, ನ್ಯಾಷನಲ್ ಹೆರಾಲ್ಡ್ ಇತ್ಯಾದಿ ವಿಚಾರದಲ್ಲಿ ನ್ಯಾಯಾಲಯಕ್ಕೆ ತೆರಳಲು ನನ್ನಲ್ಲಿ ಸಾಕಷ್ಟು ದಾಖಲೆಗಳಿವೆ. ಒಂದುವೇಳೆ ನನ್ನನ್ನು ಪ್ರಕರಣದ ಬಲಿಪಶುವಾಗಿಸಿದರೆ, ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
