Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ವಿದೇಶಿ‌ ನೇರ ಬಂಡವಾಳ ಹೂಡಿಕೆ, ದೇಶದಲ್ಲಿ ರಾಜ್ಯವೇ ಪ್ರಥಮ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ರಾಜ್ಯವೂ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದು, ಕರ್ನಾಟಕ ರಾಜ್ಯ ವಿದೇಶಿ ನೇರ ಹೂಡಿಕೆಯಲ್ಲಿ ದೇಶದಲ್ಲಿಯೇ ಪ್ರಥಮವಾಗಿದೆ. ಇದು ವಿದೇಶಿಗರು ನಮ್ಮ ರಾಜ್ಯದ ಮೇಲೆ ಇಟ್ಟಿರುವ ವಿಶ್ವಾಸವನ್ನ ಗುರುತಿಸುತ್ತದೆ ಎಂದು ಸಿಎಂ ಬಸವರಾಜ‌ ಬೊಮ್ಮಾಯಿ‌ ಹೇಳಿದರು‌.

ನಗರದಲ್ಲಿಂದು ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಮೇಲೆ ಕೈಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲು ಹಲವು ಯೋಜನೆಗಳನ್ನ ರೂಪಿಸಲಾಗಿದೆ. ಬರುವ ನವೆಂಬರ್ ನಲ್ಲಿ ಗ್ಲೊಬಲ್ ಇನ್ವೆಷ್ಟರ್ ಗಳನ್ನ ಮೀಟ್ ಮಾಡಲು ತೀರ್ಮಾನಿಸಲಾಗಿದ್ದು, ಅದಕ್ಕೆ ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಪೂರ್ವಭಾವಿ ತಯಾರಿ ಸೇರಿದಂತೆ ಹಲವು ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದರ ಉದ್ದೇಶ ದೊಡ್ಡ ಪ್ರಮಾಣದ ಬಂಡವಾಳ ಆಕರ್ಷಣೆಯ ಗುರಿಯನ್ನ ನಾವು ಹೊಂದಿದ್ದೇವೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೆ ಇದೇ ಏಪ್ರಿಲ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಸಹಕಾರಿ ರಂಗದಲ್ಲಿ ಹಲವು ಸುಧಾರಣೆಗಳನ್ನ ತರುವ ನಿಟ್ಟಿನಲ್ಲಿ‌ ಕಾರ್ಯಕ್ರಮಗಳನ್ನ ರೂಪಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಕ್ಷೀರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸುಧಾರಣೆಗಾಗಿ ಕ್ಷೀರ ಬ್ಯಾಂಕ್ ಉದ್ಘಾಟನೆಯನ್ನ ಮಾಡಲಾಗುತ್ತಿದೆ. ಇದರಿಂದ ಕ್ಷೀರ ಕ್ಷೇತ್ರದಲ್ಲಿ ಹಾಗೂ ರೈತರಿಗೆ ಅರ್ಥಿಕ ಸುಧಾರಣೆಯಾಗಲಿದೆ ಎಂದರು. ಹಾಗಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ಹಸ್ತದಿಂದ ಲೋಗೋ ಉದ್ಘಾಟನೆಯನ್ನ ಮಾಡಲಿದ್ದೇವೆ. ಅಷ್ಟೇ ಅಲ್ಲದೆ ಬರುವ 5ನೇ ತಾರೀಖಿನಂದು ಪ್ರಧಾನಮಂತ್ರಿ ಅವರು ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button