Breaking NewsLatestದಾವಣಗೆರೆರಾಜ್ಯ

ದಾವಣಗೆರೆ: ವಾಣಿಜ್ಯ ಮಳಿಗೆಗೆ ಬೆಂಕಿ; ಲಕ್ಷಾಂತರ ರೂ. ನಷ್ಟ

ದಾವಣಗೆರೆ: ಹರಿಹರ – ಶಿವಮೊಗ್ಗ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಫ್ಲೋರಿಂಗ್, ಫರ್ನಿಷಿಂಗ್ ವಸ್ತುಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರದ ಶಿವಮೊಗ್ಗ ರಸ್ತೆಯಲ್ಲಿ ಸಂಭವಿಸಿದೆ.

ಹರಿಹರ ಪಟ್ಟಣದಲ್ಲಿರುವ ಶಿವಮೊಗ್ಗ ರಸ್ತೆಯ ನವರತ್ನ ಜ್ಯೂಯಲರ್ಸ್ ಎದುರು ಈ ಘಟನೆ ನಡೆದಿದೆ.

ಮಿಠಾಯಿ ಮಂಜುನಾಥ ಮಾಲೀಕತ್ವದ ವಾಣಿಜ್ಯ ಸಂಕೀರ್ಣ ಇದಾಗಿದ್ದು, ಪ್ರಭಾಕರ್ ಫ್ಲೋರಿಂಗ್ ಫರ್ನಿಶಿಂಗ್, ಪ್ರಶಾಂತ ಜ್ಯೂಯಲರ್ಸ್, ಮಮತಾ ವಾಚ್ ಸೆಂಟರ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿಯ ಕೆನ್ನಾಲಿಗೆಗೆ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂದಾಜಿಸಲಾಗಿದೆ. ಬಳಿಕ ಹರಿಹರ, ಕುಮಾರಪಟ್ಟಣ ಹಾಗೂ ದಾವಣಗೆರೆಯ 6 ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಹರಿಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button