Breaking NewsLatestಮನರಂಜನೆಸಿನಿಮಾಸ್ಯಾಂಡಲ್ ವುಡ್

ಅಪ್ಪು ಫೋಟೋ ಹಿಡಿದು ಕೆಂಡ ಹಾಯ್ದ ಅಭಿಮಾನಿ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ನಾಲ್ಕು ತಿಂಗಳು ಕಳೆದಿದೆ. ಆದರೂ ಕೂಡ ಅಭಿಮಾನಿಗಳ ದು:ಖ ಇನ್ನೂ ಕಡಿಮೆ ಆಗಿಲ್ಲ. ಅವರ ನೆನಪಿಗಾಗಿ ಅಭಿಮಾನಿಗಳು ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಂದಿಗೂ ಸಹ ಸಮಾಧಿ ಹತ್ರ ಸಾವಿರಾರೂ ಜನರು ಭೇಟಿ ನೀಡುತ್ತಲೇ ಇದ್ದಾರೆ. ಅವರನ್ನು ಅಭಿಮಾನಿಗಳು ದೇವರ ರೂಪದಲ್ಲಿ ಕಾಣುತ್ತಿದ್ದಾರೆ.

ಇಲ್ಲೊಬ್ಬ ಅಭಿಮಾನಿ ಜಾತ್ರೆಯಲ್ಲಿ ಅಪ್ಪು ಫೋಟೊ ಹಿಡಿದು ಕೆಂಡ ತುಳಿದಿದ್ದಾನೆ. ಹೊಸಪೇಟೆ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರೆ ಮಹೋತ್ಸವ ವೇಳೆ ಅಭಿಮಾನಿಯೊಬ್ಬರು ಅಪ್ಪು ಫೋಟೋ ಹಿಡಿದು ಕೆಂಡ ತುಳಿಯುವ ಸೇವೆ ಮಾಡಿದ್ದಾರೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಯುವಕ ತನ್ನ ಅಕ್ಕನ ಆಸೆಯಂತೆ ಪುನೀತ್ ಫೋಟೋ ಹಿಡಿದು ಕೆಂಡ ತುಳಿದು ಅಭಿಮಾನ ಮೆರೆದಿದ್ದಾನೆ.

Spread the love

Related Articles

Leave a Reply

Your email address will not be published. Required fields are marked *

Back to top button