Breaking NewsLatestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಬಣ್ಣದಲ್ಲಿ ಮಿಂದೆದ್ದ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ್

ಧಾರವಾಡ: ಹೋಳಿ ಹಬ್ಬವನ್ನು ಧಾರವಾಡದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಜನತೆ ಬಣ್ಣದ ಓಕುಳಿಯಲ್ಲಿ ತೊಡಗಿದ್ದು, ಇತ್ತ ಜಿಲ್ಲಾಧಿಕಾಗಳು ಕೂಡ ಹೋಳಿ ಹಬ್ಬದಲ್ಲಿ ಭಾಗಿಯಾಗುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.

ನಗರದ ಜಿಲ್ಲಾಧಿಕಾರಿ ನಿವಾಸದ ಬಳಿಯಲ್ಲಿ ಡಿಸಿ ನಿತೇಶ ಪಾಟೀಲ್‌ರವರು ಸರ್ಕಾರಿ ನೌಕರರೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಕಲರ್ ಕಲರ್ ಬಣ್ಣಗಳಲ್ಲಿ ಜಿಲ್ಲಾಧಿಕಾರಿಗಳು ಮಿಂದೆದಿದ್ದು, ಜಿಲ್ಲೆಯ ವಿವಿಧ ಇಲಾಖೆಯ ಮುಖ್ಯ ಅಧಿಕಾರಿಗಳು ಡಿಸಿಯವರ ನಿವಾಸಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿ ಬಣ್ಣವನ್ನು ಹಚ್ಚುವ ಮೂಲಕ ಹೋಳಿ ಹಬ್ಬದ ಶುಭಾಶಾಯಗಳನ್ನು ಕೋರಿದರು. ಇನ್ನೂ ಇದಕ್ಕೆ ಪ್ರತಿಯಾಗಿ ಜಿಲ್ಲಾಧಿಕಾರಿಗಳು ಕೂಡಾ ನೌಕರರಿಗೆ ತಾವು ಕೂಡಾ ಬಣ್ಣ ಹಚ್ಚಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಸರ್ಕಾರಿ ನೌಕರಸ್ಥರೊಂದಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ರವರು ನಿವಾಸದ ಆವರಣದಲ್ಲಿ ನೆಲದ ಮೇಲೆ ಕುಳಿತುಕೊಂಡು, ಹಲಗೆ ಬಡಿದು ಸಂಭ್ರಮಚಾರಣೆಯಲ್ಲಿ ಭಾಗಿಯಾಗಿದ್ದು, ಸರ್ಕಾರಿ ನೌಕರರಲ್ಲಿ ಹೋಳಿ ಹಬ್ಬದ ಸಂಭ್ರಮವನ್ಮು ಮತ್ತಷ್ಟು ಹೆಚ್ಚಿಸಿತು.

ಇದೇವೇಳೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ರವರು, ಕಳೆದೆರಡು ವರ್ಷ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಲಿಲ್ಲ. ಕೊರೊನಾ ಮಹಾಮಾರಿ ವೈರಸ್‌ನಿಂದಾಗಿ ಬಹಳ ಹಬ್ಬಗಳನ್ನು ಸರಳವಾಗಿ ನಿರ್ಬಂಧದ ಮಧ್ಯ ಆಚರಣೆ ಮಾಡಬೇಕಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button