Breaking NewsLatestಮೆಟ್ರೋರಾಜ್ಯ
ಸದ್ಯ ಲಾಕ್ಡೌನ್ ಇಲ್ಲ; ಇನ್ನೆರಡು ವಾರ ಹಾಲಿ ನಿಯಮಗಳೇ ಮುಂದುವರಿಕೆ

ಬೆಂಗಳೂರು: ಕೋವಿಡ್ ನಿರ್ವಹಣೆ ಸಂಬಂಧ ಸಿಎಂ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿದ್ದಾರೆ.
ಸದ್ಯಕ್ಕೆ ಲಾಕ್ಡೌನ್ನಂಥ ಕ್ರಮ ಬೇಡ ಎಂದು ಸಿಎಂ ಹೇಳಿದ್ದಾರೆ. ಮುಂದಿನ ಎರಡು ವಾರ ಈಗಿರುವ ನಿಯಮಗಳೇ ಮುಂದುವರಿಕೆಯಾಗಲಿವೆ. ಹೊಸದಾಗಿ ಯಾವುದೇ ನಿಯಮಗಳು ಬೇಡವೆಂದು ಸಿಎಂ ಹೇಳಿದ್ದಾರೆ.
2ನೇ ಅಲೆಯಲ್ಲಿ ಆದಂಥ ಅನಾಹುತಗಳು ಆಗಬಾರದು ಎಂದು ಅಧಿಕಾರಿಗಳಿಗೆ ಸಿಎಂ ಎಚ್ಚರಿಸಿದ್ದಾರೆ. ಈಗ ಜಾರಿಯಲ್ಲಿರುವ ನಿಯಮಗಳನ್ನೇ ಸರಿಯಾಗಿ ಪಾಲಿಸಲು ಸಿಎಂ ಸೂಚಿಸಿದ್ದಾರೆ.
ವ್ಯಾಕ್ಸಿನೇಷನ್ ಸಂಬಂಧ ಅಗತ್ಯ ಕ್ರಮಕ್ಕೂ ಸಭೆಯಲ್ಲಿ ಸಿಎಂ ಸೂಚಿಸಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು.
