Breaking Newsಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿಯಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲಿಯೇ ನಾಲ್ವರು ಸ್ನೇಹಿತರ ದುರ್ಮರಣ

ಕಲಬುರ್ಗಿ: ನಗರದ ಹೊರವಲಯ ಕೋಟನೂರ ಬಳಿ ಇಟೋಸ್ ಕಾರ್ ಮತ್ತು ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರ್ ನಲ್ಲಿದ್ದ ನಾಲ್ವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.

ನಸುಕಿನ ಜಾವ 1 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು, ಉಲ್ಲಾಸ್ 28, ರಾಹುಲ್ 24, ಕಾಶಿಂ 26 ಮೃತ ದುರ್ದೈವಿಗಳು. ಮೃತರಲ್ಲಿ ಇನ್ನೊಬ್ಬನ ಹೆಸರು ತಿಳಿದುಬಂದಿಲ್ಲ. ಇನ್ನೋರ್ವ ಗಂಭೀರ ಗಾಯಗೊಂಡ ಯುವಕನನ್ನ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರೆಲ್ಲರು ಕಲಬುರಗಿ ನಿವಾಸಿಗಳಾಗಿದ್ದು, ಜೇವರ್ಗಿ ಮಾರ್ಗದಿಂದ ಕಲಬುರಗಿಗೆ ಇಟೋಸ್ ಕಾರ್ ನಲ್ಲಿ ಬರುತ್ತಿದ್ದರು. ಇದೆ ಮಾರ್ಗದಲ್ಲಿ ಕಲಬುರಗಿಯಿಂದ ಜೇವರ್ಗಿ ಕಡೆ ಟ್ಯಾಂಕರ್ ಹೊರಟ್ಟಿರುವಾಗ ಅಪಘಾತ ಸಂಭವಿಸಿದೆ. ಕಲಬುರಗಿ ನಗರ ಸಂಚಾರಿ 2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button