Breaking Newsಇತರ ಕ್ರೀಡೆಕ್ರೀಡೆರಾಷ್ಟ್ರೀಯ
ಅನುರಾಗ್ ಠಾಕೂರ್ ಕೇಂದ್ರದ ನೂತನ ಕ್ರೀಡಾ ಸಚಿವ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಕೇಂದ್ರದ ನೂತನ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಜತೆಯಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯನ್ನೂ ನಿಭಾಯಿಸಲಿದ್ದಾರೆ.
ಇದುವರೆಗೂ ಕಿರನ್ ರಿಜಿಜು ಅವರು ಕ್ರೀಡಾ ಸಚಿವರಾಗಿದ್ದರು. 2016-17ರ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಠಾಕೂರ್, ದೇಶದ ಶ್ರೀಮಂತ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದರು.
