Breaking NewsLatestಆರೋಗ್ಯರಾಷ್ಟ್ರೀಯ

ಹಲವು ರಾಜ್ಯಗಳಲ್ಲಿ ಮಕ್ಕಳು, ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಳ

ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆಯ ಸಮಸ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ತಿಳಿದುಬಂದಿದೆ.

2016ರಲ್ಲಿ ಶೇ.58.6ರಷ್ಟು ಮಕ್ಕಳಲ್ಲಿ ಈ ಸಮಸ್ಯೆಯಿತ್ತು. ಈ ಪ್ರಮಾಣ 2021ರಲ್ಲಿ ಶೇ.67.1ಕ್ಕೆ ಏರಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ.69.2ರಷ್ಟು ಮಕ್ಕಳು ಹಾಗೂ ಶೇ.49.4ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ದೇಶದ 23 ರಾಜ್ಯಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಏರಿಕೆಯಾಗಿದೆ. ಅವುಗಳ ಪೈಕಿ ಲಡಾಕ್ ನಲ್ಲಿ ಶೇ. 92.8 ಮಹಿಳೆಯರು, ಪಶ್ಚಿಮ ಬಂಗಾಳ 71.4, ತ್ರಿಪುರಾ 67.2, ಅಸ್ಸಾಂ 65.9, ಜಮ್ಮು ಕಾಶ್ಮೀರ 65.9, ಜಾರ್ಖಂಡ್ 65.3 ಗುಜರಾತ್ 65, ಒಡಿಶಾ 64.3, ಬಿಹಾರ 63.5 ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿ ತಿಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button