Breaking Newsಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಪಾಲಿಕೆ ಚುನಾವಣೆಯಲ್ಲಿ ವಿನಯ್ ಕುಲಕರ್ಣಿ ಇಲ್ಲದಿರುವುದರಿಂದ ಬೇಸರ ತಂದಿದೆ: ಮಾಜಿ ಸಚಿವ ಸಂತೋಷ ಲಾಡ್

ಧಾರವಾಡ : ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ವಿನಯ ಕುಲಕರ್ಣಿಯವರು ಬರಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರಿಲ್ಲದೇ ಪಾಲಿಕೆ ಚುನಾವಣೆ ಎದುರಿಸುತ್ತಿರುವುದು ನಮ್ಮಗೂ ಹಾಗೂ ಪಕ್ಷಕ್ಕೂ ಬೇಸರ ತಂದಿದೆ. ಆದರೂ ಕೂಡಾ ಅವರ ಕುಟುಂಬಸ್ಥರು, ಬೆಂಬಲಿಗರು ಸೇರಿದಂತೆ ನಮ್ಮ ಪಕ್ಷದ ಎಲ್ಲ ನಾಯಕರು ಸೇರಿಕೊಂಡು ಪಕ್ಷದ ಪಾಲಿಕೆ ಅಭ್ಯರ್ಥಿ ಗೆಲ್ಲಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡದ ನವಲೂರಿನಲ್ಲಿ ಕಾಂಗ್ರೆಸ್ ಪಾಲಿಕೆ ಅಭ್ಯರ್ಥಿ ಮಂಜುನಾಥ ಬಡಕುರಿ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ವಿನಯ ಕುಲಕರ್ಣಿಯವರು ಕಾಂಗ್ರೆಸ್ ಒಬ್ಬ ಹಿರಿಯ ನಾಯಕರಾಗಿದ್ದಾರೆ. ಅವರು ಈಗ ಇಲ್ಲದುರುವು ಬೇಸರ ಇದೆ. ವಿನಯವರ ಪತ್ನಿಯರು ಹಾಗೂ ರಾಜ್ಯ ಮಟ್ಟದ ಪಕತಷದ ನಾಯಕರು ಸೇರಿ ಪ್ರಯತ್ನ ಮಾಡುತ್ತಿದ್ದೇವೆ. ವಿನಯ ಅವರ ಕ್ಷೇತ್ರ ವ್ಯಾಪ್ತಿಯ 9 ವಾರ್ಡಿನಲ್ಲಿ ನಾವು 5-6 ವಾರ್ಡಗಳಲ್ಲಿ ನಾವು ಗೆಲ್ಲುತ್ತೆವೆ ಎಂಬ ವಿಶ್ವಾ ವ್ಯಕ್ತಪಡಿಸಿದರು.

  • ಬಿಜೆಪಿಗೆ ಜನರ ಸಮಸ್ಯಗಳ ಬಗ್ಗೆ ಯೋಚನೆ ಇಲ್ಲ

ಬಿಜೆಪಿ ಪಕ್ಷದವರು ರಾಜ್ಯದ ಜನತೆಯ ಸಮಸ್ಯ ಪರಿಹರಿಸು ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ಪ್ರತಿಬಾರಿ ಅವರು ಹೊಸ ಹೊಸ ಅಜೆಂಡಾಗಳನ್ನು ತೆಗೆದುಕೊಂಡು ಬರುತ್ತಾರೆ. ಅವರು ಈ ಹಿಂದೆ ಕೊಟ್ಟ ಭರವಸೆ ಹಾಗೂ ಪ್ರಸ್ತುತ ಸಮಸ್ಯಗಳ‌ ಹಾಗೂ ಮೂಲಭೂತ ಸಮಸ್ಯೆಗಳ ಕುರಿತು ಅವರು ಎಂದು ಚರ್ಚೆ ಮಾಡಿಲ್ಲ. ಬಿಜೆಪಿಯವರು ಸಮಸ್ಯಗಳ ಮೇಲೆ ಎಂದಿಗೂ ರಾಜಕೀಯ ಮಾಡಿಲ್ಲ. ಅವರು ಯಾವಾಗಲೂ ವಿವಾದಗಳನ್ನು ಇಟ್ಟುಕೊಂಡೇ ರಾಜಕೀಯ ಮಾಡುತ್ತಾ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button