ಹತ್ತು ದಿನಗಳ ಹಿಂದೆ ಕುಮಾರಸ್ವಾಮಿ ಅವರನ್ನು ಇಂದ್ರಜಿತ್ ಭೇಟಿ ಮಾಡಿದ್ದಾರೆ: ನಿಖಿಲ್ ಸ್ಪಷ್ಟನೆ

ರಾಮನಗರ: ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ನಮ್ಮ ತೋಟದ ಮನೆಗೆ ಬಂದಿದ್ದರು ಅಂದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಅದು 10- 15 ದಿನಗಳ ಹಿಂದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಕೇತುಗಾನಹಳ್ಳಿಯ ತೋಟದ ಮನೆಗೆ ಬಂದಿರಬಹುದು, ನಮ್ಮ ತಂದೆಯವರನ್ನ ನಾನು ಕೇಳಲಾಗಿ ಅವರು ಬಂದಿದ್ರು ಅಂತಾ ಹೇಳಿದ್ರು. ಯಾವುದೊ ಬೇರೆ ವಿಚಾರದ ಬಗ್ಗೆ ಮಾತನಾಡಲು ಅವರು ಬಂದಿರಬಹುದು. ನಾನು ಕೂಡ ಅವರನ್ನು ಹಲವು ಸಲ ಭೇಟಿ ಮಾಡಿದ್ದೇನೆ. ಮಾತನಾಡಿದ್ದೇನೆ ಎಂದರು.
ಇವತ್ತಿನ ವಿಷಯಕ್ಕೆ ಆ ಭೇಟಿಯನ್ನ ತಳಕು ಹಾಕೋದು ಬೇಡ. ನಾನು ಯಾರ ಬಗ್ಗೆಯು ಮಾತನಾಡುವುದಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಜವಬ್ದಾರಿಯುತವಾಗಿ ಇರಬೇಕು. ನಮ್ಮ ನಡೆಗಳನ್ನ ಜನರು ಗಮನಿಸುತ್ತಿರುತ್ತಾರೆ ಎಂದು ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಸಾರ್ವಜನಿಕವಾಗಿ ಯಾರು ಹೇಗೆ ಬದುಕುತ್ತಾರೆ ಎಂಬುದು ಅವರ ಅವರ ವಿಚಾರ ಮತ್ತು ಅವರಿಗೆ ಬಿಟ್ಟಿದ್ದು. ಕುಮಾರಣ್ಣ ಅವರನ್ನ ಎಲ್ಲಾ ವಿಚಾರದಲ್ಲಿಯೂ ಕ್ಲಬ್ ಮಾಡುವುದು ಸರಿಯಾದ ಕ್ರಮವಲ್ಲವೆಂದ ಅವರು, ಬೇರೆ ಬೇರೆ ದುರುದ್ದೇಶಕ್ಕೆ ಪೋಟೋಗಳನ್ನ ಬಿಟ್ಟಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಈಗಿಬ ಪೋಟೋ ವೈರಲ್ ಬಗ್ಗೆ ಇಂದ್ರಜಿತ್ ಲಂಕೇಶ್ ಅವರನ್ನೆ ನೀವು ಪ್ರಶ್ನೆ ಮಾಡಿ. ಅವರೆ ಪೋಟೋ ವಿಚಾರವಾಗಿ ಪ್ರತಿಕ್ರಿಯೆ ಕೊಡುತ್ತಾರೆ ಎಂದು ಮಾಧ್ಯಮಗಳಿಗೆ ಸಲಹೆ ಕೂಡ ನೀಡಿದ್ರು.
