ಆರೋಗ್ಯಮೆಟ್ರೋಲೈಫ್ ಸ್ಟೈಲ್ಸ್ಪೆಷಲ್ ಸ್ಟೋರೀಸ್

ವಿಶ್ವ ಕ್ಯಾನ್ಸರ್ ದಿನ: ಭಯ ಬಿಡಿ, ಎಚ್ಚರ ಇರಲಿ

ಪ್ರಿವೆಂಶನ್ ಇಸ್ ಬೆಟರ್ ದೆನ್ ಕ್ಯೂರ್ ಅನ್ನೋ ಮಾತಿದೆ. ಇದು ಅಕ್ಷರಶಃ ಸತ್ಯ. ಕಾಯಿಲೆ ಬಂದ ಮೇಲೆ ನೂರಾರು ಆಸ್ಪತ್ರೆಗಳಿಗೆ ಅಲೆದು ಲಕ್ಷ ಲಕ್ಷ ಖರ್ಚು ಮಾಡಿ ಆರೋಗ್ಯ ಕಾಪಾಡಿಕೊಳ್ಳುವ ಬದಲು ಆರೋಗ್ಯ ಹಾಳಾಗುವ ಮೊದಲೇ ಎಚ್ಚೆತ್ತುಕೊಂಡರೆ ಉತ್ತಮ. ಇದೇ ಉದ್ದೇಶದಿಂದ ಜನರಿಗೆ ಕಾನ್ಸರ್ ಖಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯಾಗಿ ಆಚರಿಸಲಾಗುತ್ತದೆ.

ಜಗತ್ತಿನ ಸಾಕಷ್ಟು ಸಾವುಗಳಿಗೆ ಕ್ಯಾನ್ಸರ್ ಕಾರಣ ಅನ್ನೋದು ಅದೆಷ್ಟೋ ಮಂದಿಗೆ ಗೊತ್ತೆ ಇಲ್ಲ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದ್ದು ಸಾಕಷ್ಟು ಮಂದಿ ಇದರಿಂದ ಸಾವಿಗೀಡಾಗುತ್ತಿದ್ದಾರೆ.

ಕ್ಯಾನ್ಸರ್ ದಿನಾಚರಣೆಯನ್ನ ಪ್ರಾರಂಭಿಸಿದ್ದು 2000ನೇ ಇಸವಿಯಲ್ಲಿ. ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜನರಿಗೆ ತಿಳಿಸಬೇಕು ಹಾಗೂ ಅದನ್ನು ತಡೆಯುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಬೇಕು ಅನ್ನೋದು ಕ್ಯಾನ್ಸರ್ ದಿನದ ಹಿಂದಿನ ಉದ್ದೇಶ.

2000ನೇ ಇಸವಿಯಲ್ಲಿ ಕ್ಯಾನ್ಸರ್ ವಿರುದ್ಧ ಮೊದಲ ವಿಶ್ವ ಸಮ್ಮಿಟ್​ನಲ್ಲಿ ವಿಶ್ವ ಕ್ಯಾನ್ಸರ್ ದಿನ ಹುಟ್ಟಿಕೊಂಡಿತು. ಪ್ಯಾರಿಸ್​ನಲ್ಲಿ ನಡೆದ ಶೃಂಗ ಸಭೆಯಲ್ಲಿ ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಇದನ್ನ ಸ್ಥಾಪಿಸಿತು.

ಶ್ವಾಸಕೋಶ, ಸ್ತನ, ಗರ್ಭಕಂಠ, ತಲೆ, ಕುತ್ತಿಗೆ ಹಾಗೂ ಕೊಲೊರೆಕ್ಟಲ್ ಕ್ಯಾನ್ಸರ್​ಗಳು ಭಾರತೀಯ ಜನಸಂಖ್ಯೆಯನ್ನು ಬಾಧಿಸುವ ಪ್ರಮುಖ ಕ್ಯಾನ್ಸರ್​ಗಳು.

ಪ್ರತಿ 10 ಮಂದಿ ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದು ವಾರ್ಷಿಕವಾಗಿ 16 ಮಿಲಿಯನ್ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

ಕ್ಯಾನ್ಸರ್ ಕಾಯಿಲೆಗೆ ಇಂಥದ್ದೆ ನಿರ್ಧಿಷ್ಟ ಕಾರಣವೆಂಬುದಿಲ್ಲ. ಕೆಲವೊಂದು ಜೀವನ ಶೈಲಿ, ಅನುವಂಶಿಕತೆಯಿಂದಲೂ ಕ್ಯಾನ್ಸರ್ ಭಾದಿಸಬಹುದು. ಜೊತೆಗೆ ಇದನ್ನ ಆರಂಭದಲ್ಲಿ ಪತ್ತೆ ಹಚ್ಚುವುದು ಕೂಡ ಕಷ್ಟ ಸಾಧ್ಯ. ಹೀಗಾಗಿಯೇ ಆಗಾಗ ವೈದ್ಯರನ್ನ ಸಂಪರ್ಕಿಸಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿದರೆ ಆರಂಭದಲ್ಲಿಯೇ ಕಂಡುಕೊಂಡು ಚಿಕಿತ್ಸೆ ಪಡೆಯಲು ಸಾಧ್ಯ.

ಈ ವರ್ಷದ ಕ್ಯಾನ್ಸರ್ ದಿನವನ್ನು ಕ್ಲೋಸ್ ದಿ ಕೇರ್ ಗ್ಯಾಪ್ ಎಂಬ ವಿಷಯದೊಂದಿಗೆ ಆಚರಿಸಲಾಗಿದೆ. ವಿಶ್ವ ಕ್ಯಾನ್ಸರ್ ದಿನದ ಮೂರು ವರ್ಷಗಳ ಕ್ಲೋಸ್ ದಿ ಕೇರ್ ಗ್ಯಾಪ್ ಅಭಿಯಾನವನ್ನು ಯುಐಸಿಸಿಯ ವಿಶ್ವ ಕ್ಯಾನ್ಸರ್ ನಾಯಕರ ಶೃಂಗ ಸಭೆಯ ಪೂರ್ವದಲ್ಲಿ ಮೊದಲು ಪರಿಚಯಿಸಲಾಯಿತು.

Spread the love

Related Articles

Leave a Reply

Your email address will not be published. Required fields are marked *

Back to top button