ನ್ಯೂಯಾರ್ಕ್ನಲ್ಲೂ ವಡಾ ಪಾವ್; ಪ್ರಿಯಾಂಕಾ ಚೋಪ್ರಾ ರೆಸ್ಟೋರೆಂಟ್ನಲ್ಲಿ ದೇಸಿ ರುಚಿ

ನಟಿ, ಬಹುಮುಖ ಪ್ರತಿಭೆಯ ಪ್ರಿಯಾಂಕ ಚೋಪ್ರಾ ಜೋನಾಸ್ ನ್ಯೂಯಾರ್ಕ್ನಲ್ಲಿ ಆರಂಭಿಸಿರುವ ‘ಸೋನಾ’ ರೆಸ್ಟೋರೆಂಟ್ ಭಾರತೀಯ ರುಚಿಯನ್ನು ಉಣಬಡಿಸುತ್ತಿದೆ.
ನಟಿಯಾಗಿ, ಚಿತ್ರ ನಿರ್ಮಾಪಕಿಯಾಗಿ, ಮಹಿಳೆಯರು ಮತ್ತು ಮಕ್ಕಳ ಕುರಿತ ಕಾಳಜಿಯಿಂದ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಾಗಿ ಗಮನ ಸೆಳೆದಿರುವ ಪ್ರಿಯಾಂಕ ಚೋಪ್ರಾ, ಇತ್ತೀಚೆಗೆ ಆತಿಥ್ಯ ವಲಯಕ್ಕೂ ಕಾಲಿಟ್ಟಿದ್ದು, ಕಳೆದ ಮಾರ್ಚ್ನಲ್ಲಿ ‘ಸೋನಾ’ ಎಂಬ ರೆಸ್ಟೋರೆಂಟ್ನ್ನು ನ್ಯೂಯಾರ್ಕ್ನಲ್ಲಿ ತೆರೆದಿದ್ದಾರೆ.
ಆರಮಭಿಸಿದಾಗಿನಿಂದಲೂ ದೇಸಿ ರುಚಿಗೆ ಹೆಸರಾಗಿರುವ ಈ ರೆಸ್ಟೋರೆಂಟ್, ಬಾಯಲ್ಲಿ ನೀರೂರಿಸುವಂತ ತಿನಿಸುಗಳಿಂದ ಗ್ರಾಹಕರನ್ನು ಸಂತುಷ್ಟಗೊಳಿಸುತ್ತಿದೆ. ಪಾನೀ ಪೂರಿಯಿಂದ ಹಿಡಿದು ದೋಸಾ ಮತ್ತು ಕುಲ್ಚಾವರೆಗೆ ದೇಸಿ ತಿನಿಸುಗಳ ರುಚಿಗೆ ‘ಸೋನಾ’ ಕೇಂದ್ರವಾಗಿದೆ.
ಇದೀಗ ಮುಂಬೈನ ಅತಿ ಪ್ರಸಿದ್ಧ ತಿನಿಸಾದ ವಡಾ ಪಾವ್ ಕೂಡ ಗ್ರಾಹಕರ ಅತಿ ಪ್ರಿಯ ಮತ್ತು ಆಕರ್ಷಕ ಐಟಂ ಆಗಿ ‘ಸೋನಾ’ ರೆಸ್ಟೋರೆಂಟ್ನ ಮೆನುವಿನಲ್ಲಿ ಸೇರಿದೆ.
ಹಾಲಿವುಡ್ನ ಸೆಲೆಬ್ರಿಟಿಗಳು, ಪತ್ರಕರ್ತರು ಎಲ್ಲರೂ ‘ಸೋನಾ’ದಲ್ಲಿ ಭಾರತೀಯ ಆಹಾರದ ವೈವಿಧ್ಯ ಸವಿಯುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ ಅವರ ಕಲಾತ್ಮಕ ಅಭಿರುಚಿಯನ್ನು ಬಿಂಬಿಸುತ್ತಿದೆ ‘ಸೋನಾ’.



