ಇತರ ಕ್ರೀಡೆಕ್ರೀಡೆರಾಷ್ಟ್ರೀಯವಿದೇಶ

ಸೋತರೂ ಮೇರಿ ಮ್ಯಾಗ್ನಿಫಿಸೆಂಟ್

ಟೋಕಿಯೋ: ಆರು ಬಾರಿ ವಿಶ್ವ ಚಾಂಪಿಯನ್ ಪಟ್ಡ, ಜತೆಯಲ್ಲಿ ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ ಮೇರಿ ಕೊಮ್ ಟೋಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಕೊಲಂಬಿಯಾದ ಇಂಗ್ರಿಟ್ ವೆಲೆನ್ಸಿಯಾ ವಿರುದ್ಧ ಮುನ್ನಡೆಯಲು ವಿಫಲರಾಗಿದ್ದಾರೆ.

ವೆಲೆನ್ಸಿಯಾ 3-2ಅಂತರದಲ್ಲಿ ಜಯ ಗಳಿಸಿದರು. ನಾಲ್ಕು ಮಕ್ಕಳ ತಾಯಿ ಮೇರಿ ಕೊಮ್ ಬಾಕ್ಸಿಂಗ್ ನಲ್ಲಿ ಈ ದೇಶಕ್ಕೆ ತನ್ನಿದಾದಷ್ಟು ಪದಕ ಗೆದ್ದುಕೊಟ್ಟಿದ್ದಾರೆ.‌ ಆದ್ದರಿಂದ ಟೋಕಿಯೋದಲ್ಲಿ ಪದಕ ಗೆಲ್ಲಲು ವಿಫಲವಾಗಿರುವುದನ್ನು ಸೋಲು ಎಂದು ಹೇಳಲಾಗದು. ತನ್ನ ಸ್ಥಾನವನ್ನು ಬೇರೆಯವರು ತುಂಬಲಿ‌ ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ. ಇದುವರೆಗೂ 46 ಮತ್ತು 48 ಕೆಜಿ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದ ಮೇರಿ ಈ ಬಾರಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಾಯಿತು.

ಪುರುಷರ ವಿಭಾಗದಲ್ಲಿ ಸತೀಶ್ ಕುಮಾರ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button