Breaking Newsಮನರಂಜನೆಸಿನಿಮಾಸೆಲೆಬ್ರಿಟಿ
ವ್ಯಕ್ತಿಯ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ ನಟಿ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ ಅವರು ಭೂ ವ್ಯವಹಾರದ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ್ದಾರೆ.
ಸುನಂದಾ ಅವರು ನಕಲಿ ಜಮೀನುಗಳ ಮಾರಾಟ ಮಾಡಿದ್ದಾನೆಂದು ಸುಧಾಕರ್ ಘರೆ ಎಂಬ ವ್ಯಕ್ತಿಯ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಿದ್ದಾರೆ. ಸುಧಾಕರ್ ಘರೆ ಎಂಬ ವ್ಯಕ್ತಿ ತನಗೆ ಆತನ ಜಮೀನುಗಳನ್ನು ಮಾರಾಟ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ನಕಲಿ ಪತ್ರಗಳನ್ನು ನೀಡಿ ತನ್ನಿಂದ 1.6 ಕೋಟಿ ರೂ ಪಡೆದಿದ್ದಾನೆ ಎಂದು ಆರೋಪಿಸಿದ್ದಾರೆ.
ಆದರೆ ಇದೀಗ ಆ ಜಮೀನುಗಳು ನಕಲಿ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಶಿಲ್ಪಾ ಶೆಟ್ಟಿಯ ತಾಯಿ ಸುನಂದಾ ಅವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
