Latestರಾಷ್ಟ್ರೀಯಸಿನಿಮಾಸೆಲೆಬ್ರಿಟಿ

ಕಿಸ್ ಮಾಡಲೆತ್ನಿಸಿದ್ದ ಕುಂದ್ರಾಗೆ ಹೆದರಿ ಟಾಯ್ಲೆಟ್​ನಲ್ಲಿ ಅಡಗಿದ್ದೆ; ಶೆರ್ಲಿನ್ ಚೋಪ್ರಾ ಆರೋಪ

ಮುಂಬೈ: ಅಶ್ಲೀಲ ಚಿತ್ರಗಳ ತಯಾರಿಕೆ ಕೇಸ್​ನಲ್ಲಿ ಜೈಲುಪಾಲಾಗಿರುವ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿ ಮುಖ ಇನ್ನೂ ಬಯಲಾಗುತ್ತಲೇ ಇದೆ. ಕುಂದ್ರಾ ಜೊತೆ ಬಿಸಿನೆಸ್ ಲಿಂಕ್ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದ ನಟಿ ಶೆರ್ಲಿನ್ ಚೋಪ್ರಾ ಈಗ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

ಈಗಾಗಲೇ ಕೆಲವು ನಟಿಯರು ಮತ್ತು ರೂಪದರ್ಶಿಗಳು ಒಬ್ಬರಾದ ಮೇಲೊಬ್ಬರು ಕುಂದ್ರಾ ಜೊತೆ ತಮಗಾದ ಕಹಿ ಅನುಭವ ಹೇಳಿಕೊಳ್ಳುತ್ತಿದ್ದು, ಈಗ ಶೆರ್ಲಿನ್ ಆರೋಪ ಕುಂದ್ರಾ ಪಾಲಿಗೆ ಇನ್ನಷ್ಟು ಗಂಭೀರ ಸನ್ನಿವೇಶವನ್ನು ತಂದಿಡುವ ಸಾಧ್ಯತೆಯಿದೆ.

ಬಿಸಿನೆಸ್ ಮಾತುಕತೆಗೆಂದು ತಮ್ಮನ್ನು ಕರೆಸಿಕೊಂಡಿದ್ದ ಕುಂದ್ರಾ, ಆ ಬಳಿಕ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರೆಂಬ ವಿವರಗಳನ್ನು ಶೆರ್ಲಿನ್ ಬಹಿರಂಗಪಡಿಸಿದ್ದಾರೆ. ಇದ್ದಕ್ಕಿದ್ದಂತೆ ತಮ್ಮ ಮನೆಗೆ ಬಂದಿದ್ದ ಕುಂದ್ರಾ ತಮಗೆ ಕಿಸ್ ಮಾಡಲು ಯತ್ನಿಸಿದರೆಂದೂ ತಾನು ತಪ್ಪಿಸಿಕೊಂಡು ಹೋಗಿ ವಾಶ್​ರೂಂನಲ್ಲಿ ಅಡಗಿಕೊಳ್ಳಬೇಕಾಯಿತೆಂದೂ ಶೆರ್ಲಿನ್ ಚೋಪ್ರಾ ಗಂಭೀರ ಆರೋಪ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ ಜೊತೆಗಿನ ಸಂಬಂಧ ಹಳಸಿದೆ ಎಂದೂ ತನ್ನ ಬಳಿ ಕುಂದ್ರಾ ಹೇಳಿದ್ದರೆಂಬ ವಿಚಾರವನ್ನು ಶೆರ್ಲಿನ್ ಬಹಿರಂಗಪಡಿಸಿದ್ದಾರೆ.

ಕಳೆದ ಏಪ್ರಿಲ್​ನಲ್ಲಿಯೇ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದ ಶೆರ್ಲಿನ್, ಮುಂಬೈ ಪೊಲೀಸರೆದುರು ಹೇಳಿಕೆ ದಾಖಲಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button