Breaking Newsಜಿಲ್ಲಾ ಸುದ್ದಿದಾವಣಗೆರೆ

ಶಾಸಕ ನೆಹರೂ ಓಲೇಕಾರ್ ಪರ ಛಲವಾದಿ ಸಮಾಜ ಡಿಮ್ಯಾಂಡ್…!

ದಾವಣಗೆರೆ: ಹಾವೇರಿ ಶಾಸಕ ನೆಹರೂ ಓಲೇಕಾರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಜಿಲ್ಲಾ ಛಲವಾದಿ ಮಹಾಸಭಾ ಮುಖಂಡರು ಆಗ್ರಹಿಸಿದ್ದಾರೆ.

ಬಿಜೆಪಿ ಪಕ್ಷಕ್ಕಾಗಿ ಛಲವಾದಿ ಸಮಾಜದ ಶಾಸಕರು ಶ್ರಮಿಸಿದ್ದಾರೆ. ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎರಡು ಬಾರಿ ಯಡಿಯೂರಪ್ಪ ಸಿಎಂ ಆದರೂ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ನೆಹರೂ ಓಲೇಕಾರ್ ಮೂರು ಬಾರಿ ಗೆದ್ದಿದ್ದಾರೆ. ಆರ್ ಎಸ್ ಎಸ್ ಮೂಲದಿಂದ ಬಂದಿದ್ದಾರೆ. ಯಾವುದೇ ಆಪಾದನೆ ಇಲ್ಲ. ಮೂವರಲ್ಲಿ ಅರ್ಹರೊಬ್ಬರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.

ಎಂ. ಪಿ. ಕುಮಾರಸ್ವಾಮಿ, ಹರ್ಷವರ್ಧನ್ ಹಾಗೂ ನೆಹರು ಓಲೇಕಾರ್ ಗೆದ್ದಿದ್ದಾರೆ. ಛಲವಾದಿ ಸಮಾಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರಲ್ಲಿ ಒತ್ತಾಯ ಮಾಡುತ್ತಿದ್ದೇವೆ. ಬಿಜೆಪಿ ರಾಷ್ಟ್ರೀಯ ನಾಯಕರು ಅಲಕ್ಷಿಸಿದರೆ ಛಲವಾದಿ ಸಮಾಜ ಬೇರೆ ರೂಪದಲ್ಲಿ ಜನರು ಪರಿಗಣಿಸಲಿದ್ದಾರೆ.‌ 80 ಲಕ್ಷ ಜನಸಂಖ್ಯೆ ಹೊಂದಿದ್ದು, ನಿರ್ಲಕ್ಷ್ಯ ಮುಂದುವರಿಸಿದರೆ ಪರಿಣಾಮ ಸರಿ ಇರಲ್ಲ ಎಂದು ಮಹಾಸಭಾದ ಗೌರವಾಧ್ಯಕ್ಷ ಹೆಚ್. ವಸಂತಪ್ಪ, ಕಾರ್ಯಾಧ್ಯಕ್ಷ ಸಿ. ಜಯಪ್ಪ ಆಗ್ರಹಿಸಿದ್ದಾರೆ.

ಇತರೆ ಜನಾಂಗದ ಶಾಸಕರಿಗೆ ಕೊಟ್ಟಂತೆ ನಮ್ಮ ಜನಾಂಗದವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲದಿದ್ದರೆ ಜನರು ಬಿಜೆಪಿ ಸರಿಯಾದ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button