ಚಿಕ್ಕಮಗಳೂರುಜಿಲ್ಲಾ ಸುದ್ದಿ

ಕಾಡಾನೆಗಳಿಂದ ಬೆಳೆ ಹಾನಿ; ಲದ್ದಿ ತಿನ್ನಬೇಕಾ ಎಂದು ರೈತರ ಪ್ರಶ್ನೆ!

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದೆಡೆ ಮಳೆಯಿಂದ ಅವಘಡಗಳು ಸಂಭವಿಸುತ್ತಿದ್ದರೆ ಇನ್ನೊಂದೆಡೆ ಕಾಡಾನೆಗಳ ಹಾವಳಿಯಿಂದ ಜನ ತತ್ತರಿಸಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಯೆಲ್ಲಾ ಕಾಡಾನೆಗಳು ತಿಂದು, ತುಳಿದು ಹಾಳು ಮಾಡುತ್ತಿವೆ. ಹೀಗಾದರೆ ಮುಂದಿನ ದಿನಗಳಲ್ಲಿ ನಾವೇನು ಮಾಡೋದು..? ಆನೆಯ ಲದ್ದಿ ತಿಂದು ಜೀವಿಸಬೇಕಾ ಎಂದು ರೈತರೋರ್ವರು ಪ್ರಶ್ನಿಸಿದ್ದಾರೆ.

ಬಾಳೂರು ಅರಣ್ಯದಿಂದ ಹೊರಬಂದಿರುವ ಕಾಡಾನೆಗಳು ಬಾಳೂರು ಸುತ್ತಮುತ್ತಲ ಗ್ರಾಮಗಳಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಅಪಾರ ಬೆಳೆಹಾನಿ ಮಾಡಿವೆ.

ಕಾಫಿ ಬೆಳೆಗಾರರಾದ ಬಾಲಕೃಷ್ಣ, ಶರಣು ಪಟೇಲ್ ಮತ್ತಿತರರ ತೋಟ ಮತ್ತು ಗದ್ದೆಗಳಲ್ಲಿ ಇಂದು ಲಗ್ಗೆಯಿಟ್ಟು, ಬೆಳೆಗಳನ್ನು ಹಾನಿಮಾಡಿವೆ. ಅರಣ್ಯ ಸಿಬ್ಬಂದಿಗಳು ಓಡಿಸಲು ಹರಸಾಹಸಪಡುತ್ತಿದ್ದಾರೆ.

ಕಾಡಾನೆಗಳು ಶಾಶ್ವತವಾಗಿ ಗ್ರಾಮಗಳಿಗೆ ಹೆಜ್ಜೆಯಿಡದಂತೆ ಸ್ಥಳಾಂತರಿಸಬೇಕು. ಹಾಗೆಯೇ ಬೆಳೆನಷ್ಟವಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button