Breaking NewsLatestರಾಷ್ಟ್ರೀಯ
ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: ಸೇತುವೆ ಮುರಿದು 9 ಪ್ರವಾಸಿಗರ ಸಾವು
ಶಿಮ್ಲಾ : ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದು ಸೇತುವೆಯೊಂದು ಮುರಿದು ಬಿದ್ದ ಪರಿಣಾಮ 9 ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾನುವಾರ ನಡೆದಿದೆ.
ಸೇತುವೆಯ ಬಳಿ ಪ್ರವಾಸಿಗರ ವಾಹನಗಳಿದ್ದವು. ಅದರ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದಾಗಿ ಅವರ 11 ಪ್ರವಾಸಿಗರಿಗೆ ಗಾಯವಾಗಿದೆ. ಅದರಲ್ಲಿ 9 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಕಿನ್ನೌರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಾಜು ರಾಮ್ ರಾಣಾ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಾಳುವಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವೈದ್ಯರ ತಂಡವನ್ನೂ ಕರೆಸಲಾಗಿದೆ. ಘಟನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
