Breaking Newsಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

2023ರ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ: ಸಂತೋಷ್ ಲಾಡ್

ಧಾರವಾಡ : ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆದ ತಪ್ಪುಗಳಿಂದ ಪಾಠ ಕಲಿತ್ತಿದ್ದೇನೆ, ಕ್ಷೇತ್ರದಲ್ಲಿ ಸಿಗುವುದಿಲ್ಲ ಎಂಬ ದೊಡ್ಡ ಕೂಗು ಇತ್ತು ಅದನ್ನು ಈಗ ಸರಿಮಾಡಿಕೊಂಡಿದ್ದೇನೆ. ಕ್ಷೇತ್ರದಲ್ಕಿಯೇ ನಾನು ಹೆಚ್ಚು ಸಮಯ ಕಳೆಯುತ್ತಿದ್ದೇನೆ. ಮುಂದಿನ ಬಾರಿ ಕಲಘಟಗಿ ಕ್ಷೇತ್ರದಿಂದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಈಗಾಗಲೇ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಜನತೆಗೆ ನಾನು ಕ್ಷೇತ್ರದಲ್ಲಿ ಉಳಿದುಕೊಳ್ಳುವ ಮೂಲಕ ಜನತೆಗೆ ಕಾನ್ಫಿಡೆನ್ಸ್ ಕೋಡತ್ತಾ ಇದ್ದೇನಿ, ಈ ಹಿಂದೆ ನಾನು ಮಾಡಿದ ತಪ್ಪನ್ನು ಮುಂದೆ ಮಾಡುವುದಿಲ್ಲ ಎಂಬ ಭರವಸೆ ಮೂಡಿಸುತ್ತಿದ್ದೇನೆ. ನಾನು ಕಲಘಟಗಿ ಕ್ಷೇತ್ರದಿಂದಲೇ ಈ ಹಿಂದೆ ಗೆದ್ದಿದ್ದೇನೆ ಬೇರೆ ಎಲ್ಲಿಯು ನಿಂತುಕೊಳ್ಳುವುದಿಲ್ಲ, ನನ್ನ ಸ್ಪರ್ಧೆ ಎನ್ನಿದರೂ ಅದೂ ಕಲಘಟಗಿ ಕ್ಷೇತ್ರದಿಂದಲ್ಲೇ ಎಂದು ಸ್ಪಷ್ಟಪಡಿಸಿದರು.

ಕಳೆದ 1978 ರಿಂದ 2008 ರವರೇಗೆ ಕಾಂಗ್ರೆಸ್ ಪಕ್ಷದ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಸೋಲು ಕಂಡಿತ್ತು, ಆದರೆ 2008 ರಲ್ಲಿ ಪಕ್ಷ ನಾಯಕರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದರು, ಅಂದು ನಾನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೇನೆ . ಇನ್ನೂ ನಾಗರಾಜ್ ಛಬ್ಬಿಯವರು ಕ್ಷೇತ್ರವನ್ನು ನಾನು ಬಿಟ್ಟು ಕೊಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ, ಆದರೆ ಅವರು ಇಲ್ಲಿ ಸ್ಪರ್ಧೆನೇ ಮಾಡಿಲ್ಲಾ ಅನ್ನುವುದು ನನ್ನ ವಾದವಾಗಿದೆ. ಅಲ್ಲದೆ ಇದೇ ಕ್ಷೇತ್ರದಲ್ಲಿ ನನಗೆ ಕ್ಷೇತ್ರದ ಜನ ಎರಡು ಬಾರಿ ಕೈ ಹಿಡಿದ್ದು, ಕಳೆದ ಬಾರಿ ಕೈ ಬಿಟ್ಟಿದ್ದಾರೆ. ಆದರೆ ಕಳೆದ ಬಾರಿ ನಾನು ಎನ್ನು ತಪ್ಪು ಮಾಡಿದ್ದೇನೆ ಅರಿತುಕೊಂಡಿದ್ದೇನೆ. ನನ್ನ ರಾಜಕೀಯ ಜೀವನ ಇಲ್ಲಿಂದಲ್ಲೇ ಆರಂಭಿಸಿದ್ದೇನೆ ಇಲ್ಲಿಯೇ ಉಳಿದುಕೊಳ್ಳುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಛಬ್ಬಿಯವರಿಗೆ ಟಾಂಗ್ ನೀಡಿದ್ದರು‌.

ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಎನು ಹೇಳುತ್ತೋ ಅದೇ ಫೈನಲ್ ಆಗುತ್ತೆ. ಈಗಾಗಲೇ ಎಲ್ಲ ಶಾಸಕರಿಗೆ ಮುಖ್ಯಮಂತ್ರಿ ಹುದ್ದೆ ಹೇಳಿಕೆಯ ಕುರಿತು ಸ್ಪಷ್ಟವಾಗಿ ಹೈಕಮಾಂಡ್ ಸಂದೇಶ ರವಾನೆ ಮಾಡಿದೆ. ಇಲ್ಲಾ ಯಾರು ಯಾರ ಫಾಲೋವರ್ ಆಗುವುದಿಲ್ಲ, ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಫಾಲೋವರ್ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button