Breaking Newsಜಿಲ್ಲಾ ಸುದ್ದಿಮನರಂಜನೆಮೈಸೂರುಸೆಲೆಬ್ರಿಟಿ

ತಂದೆಗೆ ಹುಟ್ಟಿದ ಮಗನಾದರೆ ನನ್ನ ವಿರುದ್ಧದ ಸಾಕ್ಷಿ ಬಹಿರಂಗ ಮಾಡಲಿ: ಇಂದ್ರಜಿತ್ ಲಂಕೇಶ್​​ಗೆ ನಟ ದರ್ಶನ್​​ ಸವಾಲ್

ಮೈಸೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ತಂದೆಗೆ ಹುಟ್ಟಿದ ಮಗನಾದರೆ ನನ್ನ ವಿರುದ್ಧದ ಸಾಕ್ಷಿ ಬಹಿರಂಗ ಮಾಡಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ಸವಾಲು ಹಾಕಿದ್ದಾರೆ. ಡಾ.ರಾಜ್ ಕುಮಾರ್ ಕುಟಂಬದ ಆಸ್ತಿಯನ್ನು ಖರೀದಿ ಮಾಡಿದ್ದ ನಿರ್ಮಾಪಕ ಉಮಾಪತಿ ನನಗೆ ಮಾರಾಟ ಮಾಡುತ್ತೇನೆ ಅಂದ್ರು. ಆದರೆ ಈಗ ಅವರೇ ಉಲ್ಟಾ ಆಗಿದ್ದಾರೆ ಎಂದು ದರ್ಶನ್ ಕೆಂಡ ಮಂಡಲರಾಗಿದ್ದಾರೆ.

ಇಂದ್ರಜಿತ್ ಲಂಕೇಶ್ ನಡುವಿನ ಕದನ ಮತ್ತಷ್ಟು ರಂಗಾಗಿದೆ. ದರ್ಶನ್ ಗೂಂಡಾಗಿರಿ ಮಾಡುತ್ತಾರೆ, ಹಲ್ಲೆ ಮಾಡಿರುವ ಕೇಸ್ ನಲ್ಲಿ ಕ್ಷಮೆ ಕೇಳಬೇಕು ಎಂದು ಇಂದ್ರಜಿತ್ ನೀಡಿರುವ ಸಲಹೆಗೆ ದರ್ಶನ್ ಸಿಡಿಮಿಡಿಕೊಂಡಿದ್ದಾರೆ.

ಮೈಸೂರಿನ ನರಸಿಪುರ ರಸ್ತೆಯ ತೂಗುದೀಪ ಫಾಂನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, ತಮ್ಮ ವಿರುದ್ಧ ಬರುತ್ತಿರುವ ಆರೋಪಗಳಿಗೆ ಜ್ವಾಲಾಮುಖಿಯಂತೆ ಕುದ್ದು ಉತ್ತರ ನೀಡಿದ್ರು.
ಬೆಂಗಳೂರಿನ ರೆಸಿಡೆನ್ಸಿ ರೋಡ್ ನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಮಾಲೀಕತ್ವದ ಪ್ರೆಸ್ಟೀಜ್ ಟವರ್ ನ್ನು ನಿರ್ಮಾಪಕ ಉಮಾಪತಿ ಖರೀದಿ ಮಾಡಿದ್ದರು. ನಾನು ರಾಬರ್ಟ್ ಸಿನಿಮಾ ಮಾಡುವ ವೇಳೆ ನನಗೆ ನೀಡುವ ಸಂಭಾವನೆ ಬದಲು ಪ್ರೆಸ್ಟಿಜ್ ಟವರ್ ನೀಡುವುದಾಗಿ ಉಮಾಪತಿ ತಿಳಿಸಿದ್ರು. ಇದಕ್ಕೆ ನಾನು ಸಮ್ಮತಿಸಿದೆ. ಈ ವಿಚಾರ ಪ್ರೇಮ್ ನಡುವೆ ತೀರ್ಮಾನವಾಯಿತು ದರ್ಶನ್ ವಿವರಿಸಿದ್ರು.

2018 ರಿಂದ 2021 ತನಕ ಪ್ರೆಸ್ಟೀಜ್ ಟವರ್ ಬಾಡಿಗೆಯನ್ನು ಉಮಾಪತಿ ತಂದು ಕೊಡುತ್ತಿದ್ದರು ಎಂದು ದರ್ಶನ್ ವಿವರಿಸಿದ್ರು. ಆದರೆ ಈಗ ದೊಡ್ಮನೆ ಕಡೆ ಈ ಪ್ರಕರಣವನ್ನು ಡೈವರ್ಷನ್ ಮಾಡಿದ್ದಾರೆ ಎಂದು ದರ್ಶನ್ ಕಿಡಿಕಾರಿದರು.

Spread the love

Related Articles

Leave a Reply

Your email address will not be published. Required fields are marked *

Back to top button