Breaking NewsLatestರಾಜಕೀಯರಾಜ್ಯರಾಷ್ಟ್ರೀಯ

ರಾಜಿವ್​​​ಗೆ ಕೌಶಲ್ಯ, ಶೋಭಾಗೆ ಕೃಷಿ, ನಾರಾಯಣಸ್ವಾಮಿಗೆ ಸಾಮಾಜಿಕ ನ್ಯಾಯ, ಖೂಬಾಗೆ ರಸಗೊಬ್ಬರ

ನವದೆಹಲಿ : ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರದ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಖಾತೆಗಳನ್ನು ಹಂಚಿಕೆಮಾಡಿದ್ದಾರೆ. ಕರ್ನಾಟಕದಿಂದ ನೂತನ ಸಚಿವರಾಗಿ ಸಂಸದರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ ಹಾಗೂ ಭಗವಂತ್ ಖೂಬಾ ಅವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕದ ರಾಜೀವ್ ಚಂದ್ರಶೇಖರ್ ಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಹೊಣೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಕೃಷಿ , ರೈತರ ಕಲ್ಯಾಣ ಇಲಾಖೆ ಖಾತೆ, ಎ. ನಾರಾಯಣ ಸ್ವಾಮಿಗೆ ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆ ಇಲಾಖೆ, ಭಗವಂತ ಖೂಬ ಅವರಿಗೆ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವರ ಹೊಣೆ ವಹಿಸಲಾಗಿದೆ.

ಸಚಿವರ ಖಾತೆಗಳ ವಿವರ ಇಲ್ಲಿದೆ

Spread the love

Related Articles

Leave a Reply

Your email address will not be published. Required fields are marked *

Back to top button