Breaking NewsLatestಇತರ ಕ್ರೀಡೆಕ್ರೀಡೆ

ರಷ್ಯಾದಲ್ಲಿ ಮಿಂಚಿದ ಕರ್ನಾಟಕದ ತನ್ಯಾ ಹೇಮಂತ್

ಬೆಂಗಳೂರು : ರಷ್ಯಾದಲ್ಲಿ ನಡೆದ 19 ವರ್ಷ ವಯೋಮಿತಿಯ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್​​ ನಲ್ಲಿ ಕರ್ನಾಟಕದ ಹೇಮಂತ್​​ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಗೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ಸುನೀತ್​ ಶಿವಮೊಗ್ಗ ರನ್ನರ್​ ಅಪ್​​ಗೆ ತೃಪ್ತಿಪಟ್ಟರು. ಫೈನಲ್​​​​​ ಪಂದ್ಯದಲ್ಲಿ ತನ್ಯಾ ರಷ್ಯಾದವರೇ ಆದ ಅಲೆಕ್ಸಾಂಡ್ರಾ ಚೆಶ್ಶಿನಾ ವಿರುದ್ದ 22-9, 21-13 ಅಂತರದಲ್ಲಿ ಜಯಗಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಬಾಲಕರ ವಿಭಾಗದಲ್ಲಿ ಇಬ್ಬರೂ ಭಾರತೀಯ ಸ್ಪರ್ಧಿಗಳು ಫೈನಲ್​​​​ ತಲುಪಿದ್ದು ವಿಶೇಷವಾಗಿತ್ತು. ನಂಬರ್​ ಒನ್​​ ಶ್ರೇಯಾಂಕಿತ ಆಟಗಾರ ಶಂಕರ್​ ಮುತ್ತುಸ್ವಾಮಿ 21-10, 21-13 ಅಂತರದಲ್ಲಿ ಕರ್ನಾಟಕದ ಸುನೀತ್​ ದಯಾನಂದ ಶಿವಮೊಗ್ಗ ವಿರುದ್ದ ಜಯಗಳಿಸಿ ಪ್ರಶಸ್ತಿ ಗೆದ್ದುಕೊಂಡರು

Spread the love

Related Articles

Leave a Reply

Your email address will not be published. Required fields are marked *

Back to top button