Breaking NewsLatestರಾಷ್ಟ್ರೀಯಸುದ್ದಿ

ಹೋಟೆಲ್ ಗಳಲ್ಲಿ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ ಜತೆ ಸೇರಿ ಶಿಲ್ಪಾ ಶೆಟ್ಟಿ ಪತಿ ಬ್ಲೂಫಿಲಂ: ಪೊಲೀಸರಿಂದ ಚಾರ್ಜ್ ಶೀಟ್

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬ್ಲೂ ಫಿಲಂ ಚಿತ್ರೀಕರಣ ಮಾಡುತ್ತಿದ್ದು ನಿಜ ಎಂದು ಮುಂಬೈ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಈ ಅಶ್ಲೀಲ ವಿಡಿಯೋಗಳಲ್ಲಿ ನಟಿಸಿದ್ದಾರೆ ಎಂದು ಹೇಳಲಾಗಿದೆ.

ರಾಜ್ ಕುಂದ್ರಾ ಒಟಿಟಿಗಾಗಿ ಹೋಟೆಲ್ ಗಳಲ್ಲಿ ಬ್ಲೂ ಫಿಲಂ ತೆಗೆಯುತ್ತಿದ್ದರು. ಅವರೊಂದಿಗೆ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಭಾಗಿಯಾಗಿದ್ದರು ಎಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಚಿತ್ರ ನಿರ್ಮಾಪಕ ಮೀತಾ ಜುಂಜುನ್ ವಾಲಾ, ಕ್ಯಾಮೆರಾಮ್ಯಾನ್ ರಾಜು ದುಬೆ ಎಂಬುವರು ರಾಜ್ ಕುಂದ್ರಾ ಜೊತೆಗೆ ಸೇರಿಕೊಂಡು ಪಂಚತಾರಾ ಹೋಟೆಲ್ ಗಳಲ್ಲಿ ಅಶ್ಲೀಲ ಸಿನಿಮಾ ಚಿತ್ರೀಕರಿಸುತ್ತಿದ್ದರು. ಇದನ್ನು ಒಟಿಟಿಗಳಿಗೆ ಬಿಡುಗಡೆ ಮಾಡುತ್ತಿದ್ದರು.

2021ರ ಫೆಬ್ರವರಿಯಲ್ಲಿ ಪೊಲೀಸರು ಮಧ್ ದ್ವೀಪದ ಬಂಗ್ಲೆ ಮೇಲೆ ದಾಳಿ ಮಾಡಿದಾಗ ರಾಜ್ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಾಗಿತ್ತು. ಎರಡು ತಿಂಗಳು ಜೈಲುವಾಸದ ಬಳಿಕ ರಾಜ್ ಕುಂದ್ರಾ ಬಿಡುಗಡೆಯಾಗಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button