ಕಲಘಟಗಿ ಕ್ಷೇತ್ರಕ್ಕಾಗಿ ಸಂತೋಷ ಲಾಡ್ v/s ನಾಗರಾಜ್ ಛಬ್ಬಿ

ವರದಿ : ಮಂಜುನಾಥ್. ಡಿ
ಧಾರವಾಡ: ಕಲಘಟಗಿ ಅಂದ ತಕ್ಷಣ ತಂಟಂತಾ ನೆನಪಿಗೆ ಬರುವದು, ಹುಟ್ಟಿದ ಮಗಕ್ಕಳಿಗೆ ಸಿದ್ಧವಾಗುವ ತೊಟ್ಟಿಲುಗಳು, ಹೌದು ಕಲಘಟಗಿಯಲ್ಲಿ ಸಿದ್ಧಗೊಳ್ಳುವ ತೊಟ್ಟಿಲುಗಳು ಕೀರ್ತಿ ರಾಜ್ಯದ ರಾಜ್ಯಧಾನಿಯವರೆಗೂ ಹಬ್ಬಿದೆ. ಅಷ್ಟೇ ಏಕೆ ದಿವಂಗತ ಚಿತ್ರ ನಟ ಅಂಬರೀಶ್ ಅವರು ರಾಕಿಂಗ್ ಸ್ಟಾರ್ ಯಶ್ ಪುತ್ರಿಗಾಗಿ ಇಲ್ಲಿಂದಲ್ಲೇ ತೋಟಿಲನ್ನು ನೀಡಿದ್ದರು, ಜೊತೆಗೆ ಕನ್ನಡ ಚಿತ್ರರಂಗದ ದೊಡ್ಮನೆಗೂ ಇಲ್ಲಿಯ ಸಿದ್ಧಗೊಳ್ಳುವ ತೋಟಿಲುಗಳಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ತೊಟ್ಟಿಲು ನಗರಿ ವಿಧಾನಸಭಾ ಕ್ಷೇತ್ರದಲ್ಲಿ, ಈಗ ಕೈ ಪಕ್ಷದ ನಾಯಕರಿಬ್ಬರು ಕ್ಷೇತ್ರದ ಜನರ ಓಲೈಕೆಗೆ ಮುಂದಾಗಿದ್ದಾರೆ. ಅಷ್ಟೇಯಲ್ಲದೆ ಪರೋಕ್ಷವಾಗಿ ಮುಂಬರುವ 2023ರ ವಿಧಾನ ಸಭಾ ಚುನಾವಣೆಯ ತಯಾರಿಕೆಯಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಿದ್ದಾರೆ.
ಈಗಾಗಲೇ ಕಲಘಟಗಿ ವಿಧಾನ ಸಭಾ ಕ್ಷೇತ್ರದಾದ್ಯಂತ ಮಾಜಿ ಪರಿಷತ್ ಸದಸ್ಯ ನಾಗರಾಜ್ ಛಬ್ಬಿಯವರು ನಿರಂತರವಾಗಿ ಓಡಾಟ ನಡೆಸುತ್ತಿದ್ದು, ಗ್ರಾಮ ಪಂಚಾಯತಿ ಚುನಾವಣೆಯ ಬಳಿಕ ಮತ್ತಷ್ಟು ಆ್ಯಕ್ಟಿವಾಗಿದ್ದಾರೆ, ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಜನರ ಜೊತೆಗೆ ಬೇರೆಯುತ್ತಾ ಬರುತ್ತಿರು ನಾಗರಾಜ ಚಬ್ಬಿಯವರು, ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಿಗೆ ತೆರಳಿ, ಕಾಂಗ್ರೆಸ್ ಬೆಂಬಲಿತ ಪಂಚಾಯತಿ ಸದಸ್ಯರನ್ನು ಸನ್ಮಾನ ಮಾಡುವದರ ಜೊತೆಗೆ, ಹಲವು ಅಭಿವೃದ್ಧಿ ಕಾಮಗಾರಿ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೆ ಪಕ್ಷದ ಕಾರ್ಯಕರ್ತರ ಜೊತೆಗೆ ಗ್ರಾಮೀಣ ಮಟ್ಟದ ಮುಖಂಡರನ್ನು ತಮ್ಮತ್ತ ಸೆಳೆದುಕೊಳುತ್ತಾ ಬರುತ್ತಿದ್ದು, ಪ್ರತಿ ಗ್ರಾಮ ಮಟ್ಟದಲ್ಲಿಯು ತಮ್ಮದೆಯಾದ ಕಾರ್ಯಕರ್ತರ ಪಡೆ ಜೊತೆಗೆ ಅಭಿಮಾನಿಗಳನ್ನು ಹುಟ್ಟು ಹಾಕುವುದರ ಜೊತೆಗೆ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಇನ್ನೂ ಇವರು ಹೋದ ಕಡೆಯಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಪ್ರೀತಿಯಿಂದ ನಮ್ಮ ನಾಯಕರು ಇವರು ಎಂದು ಹೇಳಿಕೊಳ್ಳುತ್ತಿದ್ದಾರೆ.
ಈ ಹಿಂದೆ 2013 ರಿಂದ 2016 ರವರೆಗೆ ನಾಗರಾಜ ಛಬ್ಬಿಯವರು ವಿಧಾನ ಪರಿಷತ್ ಸದಸ್ಯಾರಾಗಿದ್ದರು, ಬಳಿಕ 2018ರಲ್ಲಿ ನಡೆದ ವಿಧಾಸಭಾ ಕ್ಷೇತ್ರದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟೆಕೆಟಗಾಗಿ ಪೈಪೋಟಿ ಮಾಡಿದರು, ಕಾರಣಾಂತರಗಳಿಂದ ಅವರಿಗೆ ಅಲ್ಲಿ ಟಿಕೆಟ್ ಕೈ ತಪ್ಪಿತ್ತು. 2018 ರ ವಿಧಾನ ಸಭಾ ಚುನಾವಣೆ ಬಳಿಕ ಸೈಲೆಂಟಾಗಿ ಪಕ್ಷದ ಕೆಲಸಗಳನ್ನು ಮಾಡಕೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ನಾಗಾರಾಜ್ ಛಬ್ಬಿಯವರು, ಸೈಲೆಂಟಾಗಿಯೇ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಡೆಗೆ ಮುಖ ಮಾಡಿದ್ದರು. ಕ್ಷೇತ್ರದ ತುಂಬಾ ಓಡಾಟ ನಡೆಸುತ್ತಾ ತಮ್ಮದೆಯಾದ ವರ್ಚಸ್ಸುನ್ನು ಕ್ಷೇತ್ರದಲ್ಲಿ ಬೆಳಿಸಿಕೊಳ್ಳುತ್ತಾ ಬರುತ್ತಿದ್ದರು. ಗ್ರಾಮ ಪಂಚಾಯತಿ ಚುನಾವಣೆ ಬಳಿಕ ಪಕ್ಷದ ಬೆಂಬಲಿತ ನೂತನ ಪಂಚಾಯತಿ ಸದಸ್ಯರನ್ನು ಅಭಿನಂಧಿಸುವ ಮೂಲಕ ಹಾಗೂ ಕೊರೊನ ಮಾಹಾಮಾರಿ ವೈರಸ ಸಂಕಷ್ಟದಲ್ಲಿ ಕಲಘಟಗಿ ಅಳ್ನಾವರ ಹಾಗೂ ಗ್ರಾಮೀಣ ಭಾಗದ ಜನರಿಗೆ ಸುಮಾರು 22 ಸಾವಿರ ಪುಡ್ ಕಿಟ್‌ಗಳನ್ನು ನೀಡುವ ಮೂಲಕ ನೇರವಾಗಿದ್ದಾರೆ, ಅಲ್ಲದೆ ಹೆಚ್ಚಾಗಿ ಕಲಘಟಗಿ, ಅಳ್ನಾವರ ಹಾಗೂ ಗ್ರಾಮೀಣ ಭಾಗದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಾ ನಾಗರಾಜ ಛಬ್ಬಿಯವರು ಬಂದಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರಕ್ಕೆ ಕೈ ಪಕ್ಷದಿಂದ ಟಿಕೆಟ್ ಆಕಾಂಕ್ಷೆಯಾಗಿದ್ದಾರೆ ಎಂಬವುದು ಬಲವಾಗಿ ಕೇಳಿಬರುತ್ತಿದೆ.
ಇದರ ಮಧ್ಯೆ ಈಗ ಕಲಘಟಗಿ ವಿಧಾನ ಸಭಾ ಕ್ಷೇತ್ರದಿಂದ, ಕಾಂಗ್ರೆಸ್ ಪಕ್ಷವನ್ನು ಮೂರು ಬಾರಿ ಪ್ರತಿನಿಧಿಸಿ ಎರಡು ಬಾರಿ ಸತತವಾಗಿ ಗೆದ್ದ ಬಂದು, ಕಳೆದ ಬಾರಿ ಸೋತಿದ್ದ ಮಾಜಿ ಸಚಿವ ಸಂತೋಷ ಲಾಡ್ ಕೂಡಾ ಸ್ವಕ್ಷೇತ್ರದ ಕಡೆ ಮುಖ ಮಾಡಿದ್ದು, ಈ ಬಾರಿ ಕೊಂಚ ಸಂತೋಷ ಲಾಡ್ ಅವರು ವರ್ಷಗಳ ಮುಂಚಿತವಾಗಿ ತಮ್ಮ ಕ್ಷೇತ್ರದ ಕಡೆ ಮುಖ ಮಾಡಿದ್ದು, ಈಗ ಕುತೂಹಲ ಮೂಡಿಸಿದೆ. ಅಲ್ಲದೆ ಲಾಡ್ ಅವರು, ಚುನಾವಣೆಗೆ 8-9 ತಿಂಗಳ ಬಾಕಿರುವಾಗ ಕ್ಷೇತ್ರಕ್ಕದ ಕಡೆ ಮುಖ ಮಾಡುತ್ತಿದ್ದರು. ಆದರೆ ಈಗ ತಮ್ಮ ಪಕ್ಷ ಇನ್ನೊಬ್ಬರು ನಾಯಕರು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ನೋಡಿ ಲಾಡ್ ಅವರು, ಈ ಬಾರಿ ಬಹುಬೇಗ ಕ್ಷೇತ್ರದ ಕಡೆಗೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕಲಘಟಿಯಲ್ಲಿ ಕೇಳಿಬರುತ್ತಿವೆ. ಶಾಸಕರಾದ ಮೇಲೆ ಅವರು ತೀರುಗಿ ನೋಡುವುದು ಮತ್ತೆ ಚುನಾವಣೆ ಬಂದಾಗ, ಆದರೆ ಎರಡು ಭಾರಿ ಶಾಸಕರಾಗಿ ಆಯ್ಕೆ ಮಾಡಿದರು, ಇತ್ತೀಚೆಗೆ ನಮ್ಮ ಹೆಮ್ಮೆಯ ನಾಯಕರಾಗಿ ಈಗ ನಾಗರಾಜ್ ಛಬ್ಬಿಯವರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.
ಮಾಜಿ ಸಚಿವ ಸಂತೋಷ ಲಾಡ್…
ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕವನ್ನು ಗಟ್ಟಿಗೊಳಿಸಿದ್ದ ನಾಯಕ ಸಂತೋಷ ಲಾಡ ಅಂದರೆಇಲ್ಲಿ ತಪ್ಪಾಗಲಾರದು, ದೂರದ ಜಿಲ್ಲೆ ಬಳ್ಳಾರಿಯಿಂದ ಬಂದು 2008ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ಗೆಲ್ಲುವು ತಂದಕೊಟ್ಟ ನಾಯಕರಾಗಿದ್ದಾರೆ ಸಂತೋಷ ಲಾಡ್. 2008ರ ವಿಧಾನ ಸಭಾ ಚುನಾವಣೆಯ ಕಡಿಮೆ ಸಮಯದಲ್ಲಿ ಬಂದು, ತಮ್ಮದೆಯಾದ ಚುನಾವಣಾ ರಣತಂತ್ರದ ಮೂಲಕ ಶಾಸಕರಾಗಿ ಆಯ್ಕೆ ಆಗಿದರು. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ, ತಾವು ಕ್ಷೇತ್ರದಲ್ಲಿ ಇಲ್ಲದಿದ್ದರು ತಮ್ಮ ಆಪ್ತ ಸಹಾಯಕರ ಮೂಲಕ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಾ ಬಂದಿದ್ದರು. ಬಳಿಕ ಮತ್ತೊಮ್ಮೆ ಅಂದರೆ 2013ರಲ್ಲಿ ನಡೆದ ವಿಧಾನ ಚುನಾವಣೆಯಲ್ಲೂ ಎರಡನೇ ಬಾರಿಗೆ 40 ಸಾವಿರಕ್ಕೂ ಅಧಿಕ ಲೀಡನಲ್ಲಿ ಜಯಗಳಿಸುವುದರ ಮೂಲಕ ಸಚಿವ ಸ್ಥಾನವನ್ನು ಕೂಡಾ ಅಲ್ಲಂಕರಿಸಿದರು. ಆದರೆ ಕ್ಷೇತ್ರದ ಕಡೆ ಚುನಾವಣೆ ಬಂದಾಗ ಮಾತ್ರ ಸಂತೋಷ ಲಾಡ್ ಕಾಣಿಸಿಕೊಳ್ಳುತ್ತಾರೆ ಎಂಬ ಮಾತುಗಳು ನಂತರ ದಿನಗಳಲ್ಲಿ ಬಲವಾಗಿ ಕೇಳಿಬರಲಾರಂಭಿಸಿದವು, ಅಲ್ಲದೆ ಈ ಒಂದು ತಪ್ಪು ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿಯು ಬೇಸರ ಮೂಡಿಸಿತ್ತು, ಆದರೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಪಕ್ಷ, 2018ರ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಂತೋಷ ಲಾಡರನ್ನು 25 ಸಾವಿರ ಮತಗಳ ಅಂತರದಿಂದ, ಬಿಜೆಪಿ ಹಾಲಿ ಶಾಸಕರಾದ ಸಿ ಎಂ ನಿಂಬ್ಬಣ್ಣವರು ಸೋಲಿಸುವುದರ ಮೂಲಕ ಕ್ಷೇತ್ರವನ್ನು ಬಿಜೆಪಿಗೆ ನೀಡಿದರು.
ಈಗ ಕಳೆದ ಬಾರಿ ವಿಧಾನಸಭೆಯಲ್ಲಿ ಆದ ತಪ್ಪುಗಳೇ ಮತ್ತೆ ಮರುಕಳಿಸಬಾರದು ಹಾಗೂ ಕ್ಷೇತ್ರದಲ್ಲಿ ಮತ್ತೊಬ್ಬರು ಸ್ವಪಕ್ಷೀಯ ಮುಖಂಡರು ಚುನಾವಣೆಗೆ ತಯಾರಿ ನಡೆಸುತ್ತಿರುವದು ತಿಳಿದು, ಈಗ ಮಾಜಿ ಸಚಿವ ಸಂತೋಷ ಲಾಡರವರು ಕೂಡಾ ಕ್ಷೇತ್ರದಲ್ಲಿ ಠಿಕಾಣಿ ಹೂಡಲಾರಂಭಿಸಿದ್ದಾರೆ. ಈ ಭಾರಿ ಈ ಹಿಂದಿನ ಅವಧಿಗಿಂತ ಕೊಂಚ ಬೇಗನೇ ಕ್ಷೇತ್ರದ ಕಡೆಗೆ ಸಂತೋಷ ಲಾಡವರು ಗಮನ ಹರಿಸಿದ್ದು, ಕ್ಷೇತ್ರದ ತುಂಬೆಲ್ಲಾ ಓಡಾಟ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಬಳಿಕ, ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ನೂತನ ಸದಸ್ಯರುಗಳಿಗೆ ಅಭಿನಂಧನಾ ಸಮಾರಂಭ ಏರ್ಪಡಿಸುವ ಮೂಲಕ, ಕ್ಷೇತ್ರದ ಜನರ ಓಲೈಕೆ ಪಕ್ಷ ಸಂಘಟನೆಗೆ ಸಂತೋಷ ಲಾಡ ಅವರು ಮುಂದಾಗಿದ್ದಾರೆ.
ಅಲ್ಲದೆ ಈಗ ಕೊರೊನಾ ಎರಡನೇಯ ಅಲ್ಲೆಯ ನಂತರ ಕಲಘಟಗಿ ಸೇರಿದಂತೆ ಅಳ್ನಾವಾರದಲ್ಲಿ ಸಾರ್ವಜನಿಕರಿಗೆ ಪ್ರತಿದಿನ ಉಚಿತ ಉಪಹಾರ-ಊಟದ ಕ್ಯಾಟಿನಗಳನ್ನು ಆರಂಭಿಸಿದ್ದು, ಜೊತೆಗೆ ಕ್ಷೇತ್ರದ ಗ್ರಾಮೀಣ ಭಾಗದ ಸಂಕಷ್ಟದ ಜನರಿಗೆ ಆಹಾರದ ಕಿಟ್‌ಗಳನ್ನು ನೀಡುವ ಮೂಲಕ ಪುಲ್ ಆ್ಯಕ್ಟಿವ್ ಆಗಿದ್ದಾರೆ, ಅಲ್ಲದೆ ಕಲಘಟಗಿ ಕ್ಷೇತ್ರದಿಂದ ಸ್ವಪಕ್ಷೀಯ ನಾಯಕರೊಬ್ಬರು ಟಿಕೆಟ್ ಆಕಾಕ್ಷಿಯಾಗಿರುವು ತಿಳಿದು, ವರ್ಷದ ಮುಂಚಿತವಾಗಿಯೇ ಕ್ಷೇತ್ರದ ಕಡೆಗೆ ಲಾಡ್ ಅವರು ಮುಖ ಮಾಡಿದ್ದು, ಕಿಟ್ ವಿತರಣೆಗೆ ಕ್ಷೇತ್ರ ವ್ಯಾಪ್ತಿಯ ಮುಗದಕ್ಕೆ ತೆರಳಿದ ಸಂದರ್ಭದಲ್ಲಿ ಗ್ರಾಮದ ಕ್ರಾಸ್ನಲ್ಲಿ ಲಾಡ್ ಅವರಿಗೆ ಸ್ವಪಕ್ಷೀಯ, ನಾಗರಾಜ ಛಬ್ಬಿ ಬೆಂಬಲಿಗರು ತಡೆದು ಹಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೇ ಖಾರವಾಗಿಯೇ ಪ್ರತಿಕ್ರೆಯೆ ನೀಡಿದ ಸಂತೋಷ ಲಾಡ್ ಅವರು, ನಾವು ನೀವು ಒಳ್ಳೆಯ ಸ್ನೇಹಿತರಾಗಿದ್ದವರು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡೋಣ, ರಾಜಕೀಯ ಮಾಡೋದು ಬೇಡಾ ಎಂದು ಟಾಂಗ್ ನೀಡಿದ್ದರು.
ಇನ್ನೂ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ, ಸ್ವಪಕ್ಷೀಯ ನಾಯಕರಿಬ್ಬರ ಕ್ಷೇತ್ರದಲ್ಲಿ ಓಡಾಟ ನೋಡಿ, ನಾವು ಯಾರಿಗೆ ಸಪೋರ್ಟ ಮಾಡುವದು ಎಂಬ ಗೊಂದಲ ಈಗ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಯಾವ ರೀತಿಯ ಮಾರ್ಗವನ್ನು ಅನ್ನುಸರಿಸುತ್ತಾರೆ ಎಂಬುವುದು ಈಗ ಕುತೂಹಲ ಮೂಡಿಸಿದೆ. ಅಲ್ಲದೆ ಇಬ್ಬರು ನಾಯಕರು ಯಾರನ್ನು ಹೇಗೆ ಸಮಾಧಾನ ಪಡೆಸುತ್ತಾರೆ ಅನ್ನುವುದು ಕೂಡಾ ಅಷ್ಟೇ ಮುಖ್ಯವಾಗಿದೆ.
