Breaking NewsLatestರಾಷ್ಟ್ರೀಯಸುದ್ದಿ
ಜಮ್ಮು-ಕಾಶ್ಮೀರದಲ್ಲಿ ರಸ್ತೆ ಅಪಘಾತ; 9 ಮಂದಿ ಸಾವು!

ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಬುಫಲಿಯಾಜ್ ನಲ್ಲಿ ಭೀಕರ ರಸ್ತೆ ಅಪಘಾತವಾಗಿದೆ. ಇದರ ಪರಿಣಾಮವಾಗಿ 9 ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ಎಲ್ಲ ರೀತಿಯ ನೆರವುಗಳನ್ನೂ ನೀಡುತ್ತಿರುವುದಾಗಿ ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇವರೆಲ್ಲಾ ಸುರಾನ್ಕೋಟೆ ಉಪ ವಿಭಾಗಕ್ಕೆ ಸೇರಿದ ಮರಹಾ ಎಂಬ ಗ್ರಾಮದಲ್ಲಿ ಮದುವೆ ಮುಗಿಸಿ, ವಾಪಸ್ ಬರುತ್ತಿದ್ದರು. ಮರಹಾ-ಬುಫಲಿಯಾಜ್ ರಸ್ತೆಯಲ್ಲಿ, ತರರಾನಿ ವಾಲಿ ಗಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಕಂದಕಕ್ಕೆ ಬಿದ್ದಿದೆ.
ವಾಹನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು. ಕಂದಕಕ್ಕೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ. ಅದಾದ ನಂತರ ಪೊಲೀಸರು, ಆರೋಗ್ಯ ಸಿಬ್ಬಂದಿ ಆಗಮಿಸಿದ್ದಾರೆ. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಉಪ ಆಸ್ಪತ್ರೆಗೆ ದಾಖಲಿಸಲಾಗಿದೆ.
