Breaking NewsLatestರಾಷ್ಟ್ರೀಯಸುದ್ದಿ

ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕರಿಗೆ ಉಗ್ರರ ಸಂಪರ್ಕವಿದೆ:  ಬಿಹಾರದ ಮಾಜಿ ಸಿಂ

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ವೀಕ್ಷಿಸಿ ಚಿತ್ರದ ಕುರಿತಾಗಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ರಾಜ್ಯದ ಹಲವು ಕಡೆಗಳಲ್ಲಿ ತೆರಿಗೆ ವಿನಾಯಿತಿ ನೀಡಿಲಾಗಿದೆ. ಜೊತೆಗೆ ಕಾಂಗ್ರೇಸ್ ಪಕ್ಷದಿಂದ ಟೀಕೆಯೂ ವ್ಯಕ್ತವಾಗಿದೆ. ಇದೀಗ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಚಿತ್ರದ ನಿರ್ದೇಶಕ ಕುರಿತು ಹೇಳಿದ ಹೇಳಿಕೆಯೊಂದು ಬಾರಿ ಸದ್ದು ಮಾಡ್ತಿದೆ.

ಈ ಸಿನಿಮಾ ಜಮ್ಮು ಕಾಶ್ಮೀರದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಅವರಲ್ಲಿ ಭಯದ ಭಾವನೆಯನ್ನು ಹುಟ್ಟುಹಾಕಲು ಭಯೋತ್ಪಾದಕ ಸಂಘಟನೆಗಳು ಮಾಡಿದ ಪಿತೂರಿಯಾಗಿದೆ. ಅಲ್ಲದೆ, ಉಗ್ರ ಸಂಘಟನೆಗಳು ಮತ್ತು ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ನಿರ್ಮಾಪಕರ ನಡುವಿನ ಸಂಪರ್ಕದ ಬಗ್ಗೆ ಸುಳಿವು ನೀಡಿದ ಮಾಂಝಿ “ಕಾಶ್ಮೀರ ಫೈಲ್ಸ್​ ಸಿನಿಮಾ ಕಾಶ್ಮೀರಿ ಬ್ರಾಹ್ಮಣರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಪಿತೂರಿಯೂ ಆಗಿರಬಹುದು. ಇದರಿಂದ ಅವರು ಮತ್ತೆ ಕಾಶ್ಮೀರಕ್ಕೆ ಹೋಗಬಾರದು ಎಂಬ ಉದ್ದೇಶವಿರಬಹುದು” ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button