ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು : ಸಭಾಪತಿ ಬಸವರಾಜ ಹೊರಟ್ಟಿ

ಧಾರವಾಡ: ಸರ್ವೋದಯ ಶಿಕ್ಷಣ ಸಂಸ್ಥೆಯ ಗಲಾಟೆ ಪ್ರಕರಣ ನಡೆದಾಗ ನಾನು ಧಾರವಾಡದಲ್ಲೆ ಇರಲಿಲ್ಲ. ಆದರೂ ನನ್ನ ಹೆಸರು ದೂರಿನಲ್ಲಿ ಹೇಗೆ ದಾಖಲು ಮಾಡಿದ್ದಾರೋ ಗೊತ್ಗಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾನು ಇರದೇ ಇದ್ದರೂ ನನ್ನ ಮೇಲೆ ದೂರು ದಾಖಲಾಗಿದ್ದು, ನನಗೆ ಅಚ್ಚರಿ ತರಿಸಿದೆ. ಆದರೆ ಈ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ದ ಕಾನೂನು ಕ್ರಮ ಆಗಲಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೋದಯ ಶಿಕ್ಷಣ ಸಂಸ್ಥೆಯ ಗಲಾಟೆ ನಡೆದ ಸ್ಥಳದಲ್ಲಿ ನಾನಿರಲಿಲ್ಲ, ಅಷ್ಟೇ ಅಲ್ಲದೆ ನಾನು ಆ ತಾರೀಖಿನಂದು ಧಾರವಾಡ ಜಿಲ್ಲೆಯಲ್ಲೆ ಇರಲಿಲ್ಲ. ಆದರೂ ನನ್ನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಈಗಾಗಲೇ ಈ ಪ್ರಕರಣದ ಕುರಿತಾಗಿ ಎಸ್ಪಿ ಅವರು ತಪ್ಪಾಗಿದೆ ಎಂದು ಕೇಳಿದ್ದಾರೆ, ಆದರೆ ಈ ಪ್ರಕರಣದಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಎಂದರು.
ಧಾರವಾಡ ಗ್ರಾಮೀಣ ಠಾಣೆಯ ಸಿಪಿಐ ಅಮಾಯಕರಿದ್ದಲ್ಲಿ ಡಿಜಿ ಜೊತೆ ಮಾತನಾಡುವೆ, ಇನ್ನೂ ನನ್ನ ವಿರುದ್ಧ ದೂರು ದಾಖಲು ಆದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿ ಗೃಹ ಸಚಿವರಿಗೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಎಸ್ಪಿ ಅಮಾನತು ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಈಗ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಪ್ರವೀಣ ಸೂದ್‌ರವರು ಗ್ರಾಮೀಣ ಠಾಣೆಯ ಪೊಲೀಸ್ ಠಾಣೆಯ ಸಿಪಿಐ ಅವರನ್ನು ಅಮಾನತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಸಿಪಿಐ ಶ್ರೀಧರ ಸತಾರೆ ಅಮಾಯಕರಾದಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಮಾತನಾಡುವೆ ಎಂದು ತಿಳಿಸಿದರು.
