Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿ

ರೈತ ಮಹಿಳೆಯ ರೇಪ್ ಅಂಡ್ ಮರ್ಡರ್!

ಕಲಬುರಗಿ: ನಿಜಕ್ಕೂ ಇದೊಂದು ಭೀಕರ ಕೃತ್ಯ. ಈ ಘಟನೆಯಿಂದಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಹಗಲೊತ್ತಿನಲ್ಲಿ ಹೊಲದ ಕಡೆ ಹೋಗೋಕೆ ಹೆದರುವಂತಹ ಸ್ಥಿತಿ ಎದುರಾಗಿದೆ. ಇಷ್ಟಕ್ಕೂ ಆಗಿರೋದೇನು ಗೊತ್ತಾ..? ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡದಲ್ಲಿ 35ರ ಹರೆಯದ ಹೆಣ್ಣು ಮಗಳನ್ನ ಬರ್ಬರವಾಗಿ ಕೊಂದು ಹಾಕಲಾಗಿದೆ. ಶಾಮಲಾಬಾಯಿ ಕಟ್ಟಿಮನಿ ಮೃತ ದುರ್ಧೈವಿ. ಎಂದಿನಂತೆ ನಿನ್ನೆ ಮಧ್ಯಹ್ನಾ ಜಮೀನಿಗೆ ನೀರು ಬಿಡೋಕೆ ಅಂತ ಆಕೆ ಹೊಲದ ಕಡೆ ಹೋಗಿದ್ದಾಗ, ಆಕೆಯ ಮುಖದ ಮೇಲೆ ಸೈಜುಗಲ್ಲು ಎತ್ತಾಕಿ ಕೊಲೆ ಮಾಡಲಾಗಿದೆ. ಇನ್ನು ದೇಹ ಅರೆಬೆತ್ತಲೆಯಾಗಿ ಪತ್ತೆಯಾಗಿದ್ದು, ಅತ್ಯಚಾರದ ಬಳಿಕ ಆಗಂತುಕರು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಶಾಮಲಾಬಾಯಿ ಗ್ರಾಮಪಂಚಾಯ್ತಿ ಮಾಜಿ ಸದಸ್ಯ ಬಸವರಾಜ್ ಕಟ್ಟಿಮನಿಯ ಪತ್ನಿಯಾಗಿದ್ದು, ಹಳೆ ವೈಷ್ಯಮ್ಯದಿಂದ ಕೃತ್ಯ ನಡೆದಿದೆಯಾ ಅಥವಾ ಕಾಮುಕರ ಕಪಿಮುಷ್ಟಿಗೆ ಸಿಲುಕಿ ಶಾಮಲಾ ಹತ್ಯಾಯಾದಳಾ ಅನ್ನೋ ಅಂಗಲ್ ನಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಲ್ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಖಡಕ್ ಪೊಲೀಸ್ ಟೀಮ್ ಕಾರ್ಯಚರಣೆಗೆ ಇಳಿದಿದೆ. ಆರೋಪಿಗಳು ಪತ್ತೆ ಬಳಿಕವಷ್ಟೆ ಕೃತ್ಯದ ಹಿಂದೆ ಇರೋ ಅಸಲಿ ಕಾರಣ ಗೊತ್ತಾಗಲಿದೆ.

Spread the love

Related Articles

Leave a Reply

Your email address will not be published. Required fields are marked *

Back to top button