Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಹಿಜಾಬ್ ಧರಿಸಲು ಅವಕಾಶ ಕೊಡಿ , ಇಲ್ಲದಿದ್ದರೆ ಆನ್ ಲೈನ್ ಕ್ಲಾಸ್ ನಡೆಸಿ : ವಿದ್ಯಾರ್ಥಿನಿಯರ ಹೊಸ ತಗಾದೆ…!

ದಾವಣಗೆರೆ: ಕಾಲೇಜಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿ ಮಾಡುವಂತೆ ವಿದ್ಯಾರ್ಥಿನಿಯರು ಪಟ್ಟುಹಿಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಎಸ್ ಜೆವಿಪಿ ಕಾಲೇಜ್ ಬಳಿ ನಡೆದಿದೆ.

ಹಿಜಾಬ್ ಧರಿಸಿ ತರಗತಿಗೆ ತೆರಳಲು ವಿದ್ಯಾರ್ಥಿನಿಯರು ಪಟ್ಟು ಹಿಡಿದರು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸದೇ ಬರೋಲ್ಲ. ಹಿಜಾಬ್ ಹಾಕಿಕೊಂಡೇ ಬರುತ್ತೇವೆ. ಇಲ್ಲದಿದ್ದರೆ ಆನ್ ಲೈನ್ ತರಗತಿ ನಡೆಸಿ. ನಾವು ಕಾಲೇಜು ಶುಲ್ಕ ಕಟ್ಟಿದ್ದೇವೆ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗುತ್ತದೆ. ನಮ್ಮ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

ವಿದ್ಯಾರ್ಥಿನಿಯರನ್ನು ಮನವೊಲಿಸಲು ಪೊಲೀಸರು ಹಾಗೂ ಕಾಲೇಜು ಆಡಳಿತ ಮಂಡಳಿ ಎಷ್ಟೇ ಪ್ರಯತ್ನ ಮಾಡಿದರೂ ಕೇಳುತ್ತಿಲ್ಲ. ಮೊಂಡುತನ ಪ್ರದರ್ಶಿಸುತ್ತಿರುವ ವಿದ್ಯಾರ್ಥಿನಿಯರು ನಿತ್ಯವೂ ಹಿಜಾಬ್ ಧರಿಸಿ ಬರುತ್ತಿದ್ದಾರೆ‌. ಇದು ಕಾಲೇಜಿನ ಆಡಳಿತ ಮಂಡಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಕೋರ್ಟ್ ಅದೇಶವಿದೆ. ಅದನ್ನು ಪಾಲನೆ ಮಾಡಿ ಎನ್ನುತ್ತಿರುವ ಕಾಲೇಜು ಅಡಳಿತ ಮಂಡಳಿ ಮಾತಿಗೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗಳಿಗೆ ಹೋಗುವುದಾಗಿ ಹಠ ಹಿಡಿದಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಗೆ ಮನವಿ ಮಾಡಲು ಮುಂದಾದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸ್ ಹೋಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button