Latestಮನರಂಜನೆಸಿನಿಮಾಸೆಲೆಬ್ರಿಟಿ

ರಸ್ತೆ ಬದಿ ಮಾತನಾಡಿದ ಮಹಿಳೆಯ ಉಭಯ ಕುಶಲೋಪರಿ ವಿಚಾರಿಸಿದ ಶಿವರಾಜ್ ಕುಮಾರ್

ಸರಳತೆಗೆ ಮತ್ತೊಂದು ಹೆಸರೇ ಡಾ.ರಾಜ್ ಕುಮಾರ್ ಕುಟುಂಬ. ದೊಡ್ಡವರು, ಚಿಕ್ಕವರು ಎನ್ನುವ ಅಹಂಕಾರ ತೋರದೆ ಎಲ್ಲರೊಂದಿಗೆ ಸರಳವಾಗಿ ಬೆಳೆಯುವ ಗುಣ ರಾಜ್ ಕುಟುಂಬದಲ್ಲಿ ರಕ್ತಗತವಾಗಿ ಬಂದಿದೆ. ಇದು ಈಗಾಗ್ಲೆ ಸಾಕಷ್ಟು ಭಾರಿ ಪ್ರೂವ್ ಆಗಿದ್ದರು ಇದೀಗ ಮತ್ತೊಂದು ಅದು ಜಗಜ್ಜಾಹಿರಾಗಿದೆ.

ಸಾಮಾನ್ಯವಾಗಿ ಕಲಾವಿದರು ಹೊರಗೆ ಹೋದಾಗ ಬಾಡಿಗಾರ್ಡ್ ಗಳನ್ನ ಕರೆದುಕೊಂಡು ಹೋಗೋದು ಸಾಮಾನ್ಯ. ಇನ್ನೂ ಅಭೀಮಾನಿಗಳು ಮಾತನಾಡಿಸೋಕೆ ಟ್ರೈ ಮಾಡಿದ್ರೆ ಅಥವಾ ಅವರ ವಾಹನಗಳ ಫಾಲೋ ಮಾಡಿದ್ರೆ ಗರಂ ಆಗ್ತಾರೆ. ಆದ್ರೆ ನಟ ಶಿವರಾಜ್ ಕುಮಾರ್ ರಸ್ತೆಯಲ್ಲಿ ಸಿಕ್ಕ ಅಭಿಮಾನಿಯ ಜೊತೆ ಮಾತನಾಡಿ ಕುಟುಂಬ ಸದಸ್ಯರಂತೆ ಅವರ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

ಇತ್ತೀಚೆಗೆ ನಟ ಶಿವರಾಜ್ ಕುಮಾರ್ ಕಾರಿನಲ್ಲಿ ಪತ್ನಿಯ ಜೊತೆ ಹೊರಗೆ ಹೊರಟ್ಟಿದ್ದರು. ಈ ವೇಳೆ ಶಿವಣ್ಣ ಅವರನ್ನ ನೋಡಿದ ಮಹಿಳೆಯೊಬ್ಬರು ಸಖತ್ ಖುಷಿಯಾಗಿದ್ದಾರೆ. ಅಲ್ಲದೆ ಶಿವರಾಜ್ ಕುಮಾರ್ ರನ್ನ ಹೇಗಿದ್ದೀರಿ, ಮೊದಲ ಭಾರಿ ನಿಮ್ಮನ್ನ ನೋಡಿ ಖುಷಿ ಆಯ್ತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹ್ಯಾಟ್ರಿಕ್ ಹಿರೋ ಚೆನ್ನಾಗಿದ್ದೀನಿ. ಊಟ ಆಯ್ತಾ ಏನು ಬಿರಿಯಾನಿನಾ ಎಂದು ಕೇಳಿದ್ದಾರೆ. ಅದಕ್ಕೆ ಮಹಿಳೆ ಇಲ್ಲ ಸರ್, ನಿನ್ನೆ ಬಿರಿಯಾಗಿ ಆಗಿತ್ತು ಎಂದು ಉತ್ತರ ನೀಡಿದ್ದಾರೆ. ಮಹಿಳೆಯ ಉತ್ತರಕ್ಕೆ ಶಿವಣ್ಣ ನಗುವಿನ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಶಿವರಾಜ್ ಕುಮಾರ್ ಸಾಮಾನ್ಯರಂತೆ ಸಾಮಾನ್ಯರ ಜೊತೆ ಮಾತನಾಡಿರೋ ವಿಡಿಯೋ ಇದೀಗ ವೈರಲ್ ಆಗಿದೆ. ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಸಾಕಷ್ಟು ಸೈಲೆಂಟ್ ಆಗಿದ್ದ ಶಿವರಾಜ್ ಕುಮಾರ್ ಇತ್ತಿಚೆಗೆ ಸಿನಿಮಾಗಳಲ್ಲಿ ತೊಡಗಿಕೊಳ್ತಿದ್ದಾರೆ. ಪುನೀತ್ ಇಲ್ಲ ಎನ್ನುವ ನೋವನ್ನ ಒಪ್ಪಿಕೊಂಡಿರುವ ಅಭಿಮಾನಿಗಳು ಶಿವಣ್ಣರಲ್ಲಿ ಪುನೀತ್ ರನ್ನ ಹುಡುಕುತ ಕೆಲಸ ಮಾಡ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button