Latestಕೊಡಗುಜಿಲ್ಲಾ ಸುದ್ದಿ

ಕೊಡಗಿನಲ್ಲಿ ಚೇತರಿಸಿಕೊಂಡ ಪ್ರವಾಸೋದ್ಯಮ; ಅತಿಥಿಗಳ ನಿರೀಕ್ಷೆಯಲ್ಲಿ ಜಿಲ್ಲೆಯ ವರ್ತಕರು

ಕೊಡಗು : ಬ್ಯುಸಿ ಕೆಲಸದ ಜಂಜಾಟದ ನಡುವೆ ವೀಕೆಂಡ್​ನಲ್ಲಿ ಜಾಲಿಯಾಗಿ ಸ್ನೇಹಿತರ ಜತೆ ರೈಡ್​ ಹೋಗಿಬರಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಕೆಲಸದ ನಡುವೆ ಒಂದಷ್ಟು ಸಮಯ ಏಕಾಂತದಲ್ಲಿ ಕಳೆಯಬೇಕು ಎಂಬುವುದು ಹಲವರ ಮನಸ್ಥಿತಿಯಾಗಿದೆ.

ಹಾಗೇನಾದ್ರೂ ಈ ಬೇಸಿಗೆಯ ಸಮಯದಲ್ಲಿ ನೀವು ಮಡಿಕೇರಿ ಕಡೆಗೆ ಪ್ರವಾಸಕ್ಕೆ ಹೋಗಲು ಯೋಜನೆ ರೂಪಿಸ್ತಾ ಇದ್ರೆ, ನಿಮಗೆ ಖುಷಿಯ ವಿಚಾರವೊಂದಿದೆ.‌ ಕೊಡಗಿನ ಪ್ರಖ್ಯಾತ ಪ್ರವಾಸಿ ತಾಣ ಐತಿಹಾಸಿಕ ಗ್ರೇಟರ್ ರಾಜಾ ಸೀಟ್(Greater Raja Seat) ಇದೀಗ ಮತ್ತಷ್ಟು ಅಭಿವೃದ್ಧಿಗೊಂಡು ಪ್ರವಾಸಿಗರಿಗಾಗಿ ಶೃಂಗಾರಗೊಂಡು ಕಾಯುತ್ತಿದೆ.

ಗ್ರೇಟರ್ ರಾಜಾಸೀಟ್ ಅಬಿವೃದ್ಧಿಯಾಗಿದ್ದ ಸುಮಾರು ಐದು ಕೋಟಿ ವೆಚ್ಚದ ಕಾಮಗಾರಿ‌ ಸದ್ಯ ಸಂಪೂರ್ಣವಾಗಿದ್ದು, ಕೊರೋನಾ ಕೂಡ ಈ ಬಾರಿ ತನ್ನ ಅಬ್ಬರವನ್ನು ತಗ್ಗಿಸಿ ನಿಂತಿದ್ದು, ಪ್ರವಾಸಿಗರನ್ನು ಮಂಜಿನ ನಗರಿ ಮಡಿಕೇರಿ ಕೈ ಬೀಸಿ ಕರೆಯುತ್ತಿದೆ.

ಕೊಡಗಿನಲ್ಲಿ ಹಲವಾರು ಪ್ರವಾಸಿ ತಾಣಗಳಿದ್ದು, ರಾಜಾಸೀಟ್, ಅಬ್ಬಿಫಾಲ್ಸ್, ಮಾಂದಪಟ್ಟಿ, ಹಲವಾರು ಪ್ರವಾಸಿ ಟೆಂಪಲ್ಗಳು, ಅರಮನೆಗಳು, ಮಡಿಕೇರಿಯ ಕೋಟೆ, ಬೆಟ್ಟಗುಡ್ಡಗಳು, ವ್ಯೂ ಪಾಯಿಂಟ್ಗಳು, ನೆಹರು ಮೈದಾನ ಹೀಗೆ ಹತ್ತು ಹಲವು. ಪ್ರವಾಸಕ್ಕಾಗಿ ಬರುವ ಪ್ರವಾಸಿ ಅತಿಥಿಗಳು ಉಳಿದುಕೊಳ್ಳಲು ಅಗತ್ಯ ರೆಸಾರ್ಟ್ ಗಳು,ಹೋಂ ಸ್ಟೇಗಳು, ಲಾರ್ಡ್ಜ್ ಕ್ಕಿಂತ ಹೆಚ್ಚಿವೆ.

ಮಡಿಕೇರಿಗೆ ಬರುವ ಪ್ರವಾಸಿಗರು ರಾಜಾ ಸೀಟ್​ಗೆ ಬಂದು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಸುಮಧುರ ಸೂರ್ಯಾಸ್ತವನ್ನು ವೀಕ್ಷಣೆ ಮಾಡುವುದು ಒಂದು ವಿಧದ ನೈಸರ್ಗಿಕ ಆನಂದವನ್ನು ನೀಡುತ್ತದೆ.

ಕೊಡಗಿಗೆ ಬರುವ ಪ್ರವಾಸಿಗರಿಗಾಗಿ ಇಲ್ಲಿನ ಸ್ಥಳೀಯರು ವಿಶೇಷ ಅಡುಗೆಯನ್ನು ತಯಾರಿಸುತ್ತಾರೆ. ಹೋಮ್ ಮೇಡ್ ವೈನ್, ವಿವಿದ ಮಾದರಿಯ ಸಾಂಬಾರ ಪದಾರ್ಥಗಳು, ಎಲ್ಲವೂ ಕೊಡಗಿನಲ್ಲಿ ಲಭ್ಯ.ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ‌ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಜಂಟಿಯಾಗಿ ಹಳೆಯ ರಾಜಾಸೀಟ್ ಅನ್ನು ಗ್ರೇಟರ್ ರಾಜಾಸೀಟ್ ಆಗಿ ಅಭಿವೃದ್ಧಿ ಪಡಿಸಿದೆ.

ಐದು ಕೋಟಿ ರೂಪಾಯಿ ವೆಚ್ಚದ ಈ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಗೊಳ್ಳಲಿದೆ.ಈ ಹೊಸ ಯೋಜನೆಯಿಂದ ಮಡಿಕೇರಿಯ ಕಡಿದಾದ ಬೆಟ್ಟದಲ್ಲಿ ಎಂಟು ವೀವ್ ಪಾಯಿಂಟ್​ಗಳು ನಿರ್ಮಾಣವಾಗುತ್ತಿದೆ.

ಕೊಡಗಿನಲ್ಲಿ ಹಲವರ ಬದುಕು ಪ್ರವಾಸೋದ್ಯಮವನ್ನೆ ನಂಬಿದೆ. ಪ್ರಕೃತಿ ವಿಕೋಪ, ಕೊರೋನಾ ಅಟ್ಟಹಾಸದಿಂದ ಕಂಗಾಲಾಗಿದ್ದ ಕೊಡಗಿಗೆ ಇದೀಗ ಸ್ವಲ್ಪ ಮಟ್ಟಿನ ಚೇತರಿಕೆ ದೊರೆತಿದ್ದು ಪುಟಿದೇಳುವ ತವಕದಲ್ಲಿದೆ.ಕೊಡಗಿನ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಾ ಇದೆ. ಪ್ರವಾಸಿಗರ ಮನ ತಣಿಸಲು ಹೊಸ ಹೊಸ ಯೋಜನೆಗಳು ಅನುಷ್ಠಾಗೊಳುತ್ತಿವೆ. ಇದರೊಂದಿಗೆ ಕೊಡಗಿನ‌ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗುತ್ತಿವೆ

Spread the love

Related Articles

Leave a Reply

Your email address will not be published. Required fields are marked *

Back to top button