ಡಾಲಿ ಧನಂಜಯ್ ಪ್ರಫೋಸ್ಗೆ ಅಮೃತಾ ಕೊಟ್ಟ ರಿಯಾಕ್ಷನ್ ಏನ್ ಗೊತ್ತಾ?

ಡಾಲಿ ಧನಂಜಯ್ ಹಾಗೂ ಅಮೃತಾ ಅಯ್ಯಂಗಾರ್ ಜೋಡಿಯಾಗಿ ನಟಿಸಿದ್ದ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಜೋಡಿಗಳು ಇದಕ್ಕೂ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದರು. ಈ ಜೋಡಿಗಳು ರೀಲ್ನಲ್ಲಿ ಮಾತ್ರವಲ್ಲ ರಿಯಲ್ನಲ್ಲೂ ಪ್ರಣಯ ಪಕ್ಷಿಗಳು ಅನ್ನೊ ಮಾತು ಕೇಳಿ ಬಂದಿತ್ತು. ಅಲ್ಲದೆ ಮೊನೆ ತಾನೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಧನಂಜಯ್ ಅಮೃತಾಗೆ ಪ್ರಪೋಸ್ ಮಾಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ನಟಿ ಅಮೃತಾ ಅಯ್ಯಂಗಾರ್ ಡಾಲಿ ಧನಂಜಯ್ ಅವರ ಪ್ರೇಮ ನಿವೇದನೆಯ ಬಗ್ಗೆ ಮಾತನಾಡಿದ್ದಾರೆ.
ರಿಯಾಲಿಟಿ ಶೋನಲ್ಲಿ ಧನಂಜಯ್ ಅಮೃತಾಗೆ ಪ್ರಪೋಸ್ ಮಾಡಿದ್ದು ನೋಡಿ ಈ ಜೋಡಿಗಳು ನಿಜವಾಗಿಯೂ ಪ್ರೀತಿಯಲ್ಲಿ ಬಿದಿದ್ದಾರೆ ಎಂದುಕೊಂಡಿದ್ದರು. ಅಲ್ಲದೆ ನೆಟ್ಟಿಗರು ನಟಿ ಅಮೃತ ಬಳಿ ನಿಜವಾಗಿಯೂ ನೀವಿಬ್ಬರು ಪ್ರೀತಿಸುತ್ತಿದ್ದೀರಾ ಎಂದು ಕೇಳಿದ್ದರು. ಇದೀಗ ಅಮೃತ ಅಭಿಮಾನಿಗಳ ಲೆಕ್ಕಾಚಾರವನ್ನ ತಲೆಕೆಳಗಾಗುವಂತ ಉತ್ತರ ಕೊಟ್ಟಿದ್ದಾರೆ.
ನಾವಿಬ್ಬರು ಲವ್ ಅಲ್ಲಿ ಬಿದ್ದಿಲ್ಲ. ಡಾಲಿ ನನಗೆ ಪ್ರಪೋಸ್ ಮಾಡಿದ್ದು ಕಾರ್ಯಕ್ರಮದ ಟಾಸ್ಕ್ಗಾಗಿ ಮಾತ್ರ. ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಕಾರ್ಯಕ್ರಮಕ್ಕೆ ಹೋಗಿದ್ದೆವು. ಲವ್ ಸೀನ್ನಲ್ಲಿ ನಟಿಸಲು ಧನಂಜಯ್ ತುಂಬಾ ನಾಚಿಕೆ ಪಡ್ತಾರೆ ಅನ್ನೋ ವಿಚಾರವನ್ನ ಗಣೇಶ್ಗೆ ಹೇಳಿದ್ವಿ. ಅದಕ್ಕೆ ಅವರು ರಿಯಾಲಿಟಿ ಶೋನಲ್ಲಿ ಧನಂಜಯ್ ನನಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಿದ್ದರು. ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡ ಡಾಲಿ ನನಗೆ ಪ್ರಪೋಸ್ ಮಾಡಿದರು ಅಷ್ಟೇ. ಆ ಕ್ಷಣದಲ್ಲಿ ಧನಂಜಯ್ ಅವರ ಡೆಡಿಕೇಶನ್ ನೋಡಿ ನಾನು ಎಮೋಷನಲ್ ಆದೆ. ಅದನ್ನು ನೋಡಿದವರು ನಾವು ಲವ್ ಮಾಡ್ತಿದ್ದೀವಿ ಎಂದು ಕೊಂಡರು ಎಂದು ಅಮೃತ ಅಯ್ಯಂಗಾರ್ ಸ್ಪಷ್ಟನೆ ನೀಡಿದರು.




