Breaking NewsLatestರಾಷ್ಟ್ರೀಯಸುದ್ದಿ

Union Budget 2022: ಪ್ರಸಕ್ತ ಸಾಲಿನಿಂದ ಇ ಪಾಸ್​​ಪೋರ್ಟ್​​ ಜಾರಿಗೆ: ನಿರ್ಮಲಾ ಸೀತಾರಾಮನ್​​ ​ಘೋಷಣೆ

ನವದೆಹಲಿ: ಸಾರ್ವಜನಿಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಇ ಪಾಸ್​​ಪೋರ್ಟ್​​ಗಳನ್ನು ಜಾರಿಗೆ ತರಲಾಗುಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಘೋಷಿಸಿದ್ದಾರೆ.

ಇ-ಪಾಸ್‌ಪೋರ್ಟ್‌ಗಳು ಹೆಚ್ಚಿನ ಭದ್ರತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಎಕ್ಟ್ರಾನಿಕ್ ಚಿಪ್ ಇದ್ದು ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ಇರುತ್ತದೆ.

ಈ ಹೊಸ ಇ-ಪಾಸ್‌ಪೋರ್ಟ್ ಹೊಸ ಹೊಸ ಫೀಚರ್‌ಗಳನ್ನು ಹೊಂದಿದೆ. ಇದರಲ್ಲಿ ಮೈಕ್ರೋಚಿಪ್‌ ಇರಲಿದೆ. ಇದು ಪಾಸ್‌ಪೋರ್ಟ್‌ದಾರರ ಬಯೊಮೆಟ್ರಿಕ್‌ ಡೇಟಾ, ಭದ್ರತೆಯ ವಿಚಾರಗಳು ಇರಲಿದೆ.
ಪ್ರಸ್ತುತ ಪಾಸ್‌ಪೋರ್ಟ್ ಮುದ್ರಿತ ಪುಸ್ತಕದ ರೂಪದಲ್ಲಿ ಇದೆ.

ಕೇಂದ್ರ ಸರ್ಕಾರವು ಆರಂಭಿಕ ಹಂತದಲ್ಲಿ 20 ಸಾವಿರ ಅಧಿಕಾರಿಗಳು ಹಾಗೂ ರಾಜತಾಂತ್ರಕರಿಗೆ ಇ ಪಾಸ್‌ಪೋರ್ಟ್ ಅನ್ನು ವಿತರಣೆ ಮಾಡಲಿದೆ. ಉಳಿದವರು ಈ ಸಂದರ್ಭದಲ್ಲಿ ಮುದ್ರಿತ ಪಾಸ್‌ಪೋರ್ಟ್‌ಗಳನ್ನೇ ಎಂದಿನಂತೆ ಬಳಕೆ ಮಾಡಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button