Breaking NewsLatestಜಿಲ್ಲಾ ಸುದ್ದಿಸುದ್ದಿಹುಬ್ಬಳ್ಳಿ - ಧಾರವಾಡ
ರಾತ್ರಿ ಮಲಗಿದ್ದ ವೇಳೆ ಹೊರಗಿನಿಂದ ಲಾಕ್, ಮನೆ ಮಾಲೀಕರಿಗೆ ಶಾಕ್!

ಹುಬ್ಬಳ್ಳಿ: ಮನೆಯ ಮಾಲೀಕರು ಒಳಗಡೆ ಮಲಗಿದ್ದ ವೇಳೆಯಲ್ಲಿ ಹೊರಗಡೆಯಿಂದ ರಾತ್ರೋ ರಾತ್ರಿ ಒಂದೇ ಪ್ಲ್ಯಾಟನ ಎಂಟು ಮನೆಗಳಿಗೆ ಖದೀಮರು ಹೊಸ ಬೀಗ ಹಾಕಿ ಲಾಕ್ ಮಾಡಿ, ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದ ಘಟನೆ ಧಾರವಾಡದ ಆಕಾಶವಾಣಿಯ ಸಿಬ್ಬಂದಿಯ ಕಾಲೊನಿಯಲ್ಲಿ ನಡೆದಿದೆ.
ನಗರದ ಕೆಸಿಡಿ ಕಾಲೇಜು ವೃತದ ಬಳಿಯಿರುವ ಆಕಾಶವಾಣಿ ಸಿಬ್ಬಂದಿಗಳ ಪ್ಯಾಟ್‌ನಲ್ಲಿ ಎಂಟು ಮನೆಗಳನ್ನು ರಾತ್ರೋ ರಾತ್ರಿ ಮಾಲೀಕರು ಒಳಗಡೆ ಇರುವ ವೇಳೆಯಲ್ಲಿಯೇ ಲಾಕ್ ಮಾಡಲಾಗಿದೆ. ಬಹುತೇಕ ಮನೆಯ ಬಾಗಿಲಿಗೆ ಹೊಸ ಬೀಗ ಹಾಕಿ ಲಾಕ್ ಮಾಡಲಾಗಿದ್ದು, ಇದರ ಜೊತೆಗೆ ಕೆಲವು ಮನೆಗಳಿಗೆ ಕೀ ಹಾಕುವ ಸರಳವನ್ನು ಅಷ್ಟೇ ಹಾಕಿ ಲಾಕ್ ಮಾಡಿರುವುದು ಪ್ಲ್ಯಾಟನ್ ಮಾಲೀಕರನ್ನು ಬೆಚ್ಚಿ ಬೀಳಿಸಿದೆ.
