
ಬೆಂಗಳೂರು: ಬ್ಯಾಂಕ್ ನಲ್ಲಿ ಮಾಡಿದ ಸಾಲವನ್ನು ತೀರಸುವುದಕ್ಕೆ ಆಗದೆ ಬ್ಯಾಂಕ್ ಮ್ಯಾನೆಜರ್ ಗೆ ಚಾಕು ತೋರಿಸಿ ಹಣ ದೋಚಿ ಪರಾರಿಯಾಗುತ್ತಿದ್ದ ಇಂಜಿನಿಯರ್ ವಿದ್ಯಾರ್ಥಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಧೀರಜ್ ಬಂಧಿತ ಆರೋಪಿ. ಈತ ಆನ್ ಲೈನ್ ನಲ್ಲೇ ಸುಮಾರು 40 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಇದೀಗ ಸಾಲವನ್ನು ತೀರಿಸಲಾಗದೆ ದರೋಡೆ ಮಾಡಿದ್ದಾನೆ.
ನಗರದ ಬಿಟಿಎಂ ಲೇಔಟ್ ನ ಎಸ್ ಬಿಐ ನಲ್ಲಿ ಬ್ಯಾಂಕ್ ಸಿಂಬ್ಬಂದಿಗೆ ಚಾಕು ತೋರಿಸಿ ಸುಮಾರು 4 ಲಕ್ಷ ಕ್ಯಾಶ್ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಇದೀಗ ಆರೋಪಿ ಧೀರಜ್ ನನ್ನ ಬಂಧಿಸುವಲ್ಲಿ ಮಡಿವಾಳ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.




