Latestರಾಷ್ಟ್ರೀಯವಿದೇಶ

ಫೆ.28ರವರೆಗೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರ ನಿರ್ಬಂಧ

ನವದೆಹಲಿ: ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ಆಗಮನವನ್ನ ನಿರ್ಭಂಧಿಸಲಾಗಿದ್ದು, ಇದೀಗ ಈ ಆದೇಶವನ್ನು ಫೆಬ್ರವರಿ 28ರ ವರೆಗೆ ಮತ್ತೆ ಮುಂದೂಡಲಾಗಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ಕೇಂದ್ರ ವಿಮಾನ ಸಚಿವಾಲಯ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಸಂಚಾರದ ನಿರ್ಬಂಧವನ್ನು ದಿನಾಂಕ 28-2-2022ರವರೆಗೆ ವಿಸ್ತರಣೆ ಮಾಡಿರೋದಾಗಿ ಆದೇಶ ಹೊರಡಿಸಿದೆ.

ಡಿಜಿಸಿಎ ಇಂದ ಅನುಮತಿ ಪಡೆದಂತೆ ವಿಶೇಷ ವಿಮಾನಗಳ ಸಂಚಾರಕ್ಕೆ, ಅಂತರಾಷ್ಟ್ರೀಯ ಸರಕು ಸಾಗಾಣಿಕೆ ವಿಮಾನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button