ಮೈಸೂರು

ಪೊಲೀಸ್ ಠಾಣೆಯಲ್ಲೇ ತಂದೆಯ ಹುಟ್ಟುಹಬ್ಬ ಆಚರಿಸಿದ ಇನ್ಸ್‌ಪೆಕ್ಟರ್

ಮೈಸೂರು ; ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ತಂದೆಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಪೊಲೀಸ್ ಠಾಣೆಯನ್ನೇ ಮನೆ ಮಾಡಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಯಡವಟ್ಟಿನ ಘಟನೆ ನಡೆದಿದೆ. ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ತಮ್ಮ ತಂದೆಯ ಬರ್ತ್​​ಡೆಯನ್ನು ತಾವು ಅಧಿಕಾರದಲ್ಲಿರುವ ಠಾಣೆಯಲ್ಲಿ ಆಚರಿಸಿದ್ದಾರೆ.

ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ತಂದೆ ನಂಜುಡೇಗೌಡ ಅವರ 75ನೇ ವರ್ಷದ ಹುಟ್ಟುಹಬ್ಬ ಆಚರಣೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಭರ್ಜರಿಯಾಗಿ ನಡೆದಿದೆ.

ಠಾಣೆಯಲ್ಲಿ ಪತ್ನಿ ಮತ್ತು ‌ಮಕ್ಕಳ ಜೊತೆ ತಂದೆಯ ಬರ್ತ್​​ಡೆಯನ್ನು ಇನ್ಸ್‌ಪೆಕ್ಟರ್ ಬಾಲಕೃಷ್ಣ ಆಚರಿಸಿದ್ದಾರೆ. ಇನ್ಸ್‌ಪೆಕ್ಟರ್ ಬಾಲಕೃಷ್ಣ ವರ್ತನೆಗೆ ಈಗ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೇಳಿಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button