ಅಧಿಕಾರ ಮಾಡಿ ಎಂದು ಜೆಡಿಎಸ್ ಮನೆಬಾಗಿಲಿಗೆ ಕಾಂಗ್ರೆಸ್ ಹೋಗಿಲ್ಲ: ಸಿದ್ದರಾಮಯ್ಯ

ಕೋಲಾರ: ಇತ್ತೀಚೆಗೆ ರಾಜ್ಯದಲ್ಲಿ ಬಿದ್ದ ಧಾರಾಕಾರ ಮಳೆಗೆ ಬೆಳೆಗಳು ಸಂಪೂರ್ಣ ನಾಶವಾಗಿದೆ ಬೆಳೆ ಕಳೆದುಕೊಂಡಿರುವ ರೈತರ ಸಂಕಷ್ಟದ ನೆರವಿಗೆ ರಾಜ್ಯ ಸರ್ಕಾರ ಧಾವಿಸಲು ಮತ್ತು ಕೊರೊನಾ ಸಮಸ್ಯೆಗೆ ಪರಿಹಾರ, ಬಿಟ್ ಕಾಯಿನ್ ಅವ್ಯವಹಾರ ಸೇರಿದಂತೆ ರಾಜ್ಯದಲ್ಲಿನ ಪರ್ಸೆಂಟೇಜ್ ಬಗ್ಗೆ ನಾಳೆಯಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗಂಭಿರವಾಗಿ ಧ್ವನಿಯೆತ್ತುತ್ತೇನೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಆರ್ ಎಲ್ ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪನವರ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ, ಬಲವಂತವಾಗಿ ಮತಾಂತರ ಮಾಡುವುದು ಕಾನೂನಿನ ಚೌಕಟ್ಟಿನಲ್ಲಿ ಅಪರಾಧವಾಗಿದೆ ಆದರೆ ಸ್ವಯಂ ಪ್ರೇರಿತವಾಗಿ ಮತಾಂತರ ಆಗುವವರಿಗೆ ಅವರದೇ ಆದ ಶ್ವೇಚ್ಚತೆ ಇದೆ ಸದನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 15 ಸ್ಥಾನ ಗೆಲ್ಲಲಿದೆ. ಕೋಲಾರದಲ್ಲಿ ಕೂಡ ಅನಿಲ್ ಕುಮಾರ್ ಕೂಡ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಜೆಡಿಎಸ್ ನವರು 6 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದಾರೆ ಇನ್ನು ಉಳಿದ 19 ಕಡೆ ಏಕೆ ಹಾಕಿಲ್ಲ ಯಾವ ಕ್ಷೇತ್ರಗಳಲ್ಲಿ ಜೆಡಿಎಸ್ನವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲವೋ ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಗೆ ವೋಟು ಹಾಕಿಸಿರುತ್ತಾರೆ. ಜೆಡಿಎಸ್ ಯಾವಾಗಲೂ ಬಿಜೆಪಿಯ ಬಿ ಟೀಂ ಎಂದರು.
ನಾವು ಯಾವತ್ತೂ ಜೆಡಿಎಸ್ ನವರ ಮನೆಯ ಬಾಗಿಲಿಗೆ ಹೋಗಿ ನಮ್ಮ ಜೊತೆ ಅಧಿಕಾರ ಮಾಡಿ ಎಂದು ಕೇಳಿಲ್ಲ, ಕಳೆದ ಭಾರಿ ಮಾತುಕತೆ ಆಗಿದ್ದು ನಿಜ ಆದರೆ ನಾನಂತೂ ಅವರ ಮನಗೆ ಹೋಗಿಲ್ಲ, ನಾನು ಬಿ ಟೀಂ ಅಂದರೆ ಜೆಡಿಎಸ್ ನವರು ಯಾಕೆ ರಿಯಾಕ್ಟ್ ಮಾಡಬೇಕು. ಕುಂಬಳಕಾಯಿ ಕಳ್ಳ ಎಂದರೆ ಜೆಡಿಎಸ್ ನವರು ಯಾಕೆ ಹೆಗಲು ಮುಟ್ಕೊಂಡು ನೋಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆ ನ ಜೆಡಿಎಸ್ ನವರು ಏಕೆ ವಿರೋಧ ಮಾಡಿಲ್ಲ. ಕೊರೊನಾ ಸಮಯದಲ್ಲಿ ಅಸಂಬ್ಲಿಯಲ್ಲಿ ಬಿಜೆಪಿಗೆ ಜೆಡಿಎಸ್ ನವರು ಯಾಕೆ ಬೆಂಬಲ ನೀಡಿದ್ದಾರೆ. ಆಗಾಗಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ವಿರುದ್ದ ಹರಿಹಾಯ್ದರು.
ನಾನು ಮಠಾಧೀಶರ ಬಗ್ಗೆ ಮಾತನಾಡುವುದಿಲ್ಲ ಆದರೆ ಆಹಾರ ಪದ್ಧತಿ ಅವರವರಿಗೆ ಬಿಟ್ಟಿರೋ ವಿಚಾರ, ಮೊಟ್ಟೆ ಯಾರು ತಿನ್ನುತಾರೋ ಅವರಿಗೆ ಕೊಡಿ ಇಲ್ಲ ಅಂದ್ರೆ ಕೊಡ್ಬೇಡಿ ಶಾಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ನೀಡುತ್ತಿರುವ ಮೊಟ್ಟೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಕೋಲಾರ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸ್ಪರ್ಧಿಸುವಂತೆ ಬೆಂಬಲಿಗರು ಕರೆಯುತ್ತಿದ್ದಾರೆ, ನೋಡೋಣ ಮುಂದೆ ಹೈಕಮಾಂಡ್ ತೀರ್ಮಾನದಂತೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.



