ರಾಮನಗರ

ಕನಕಪುರದಲ್ಲಿ ಕೋರಿಯರ್ ಏಜೆಂಟ್ ಆತ್ಮಹತ್ಯೆ

ರಾಮನಗರ: ಸಾಲ ಬಾಧೆಯಿಂದ ಕೊರಿಯರ್ ಏಜನ್ಸಿಯ ಯುವಕನೊಬ್ಬ ಕಚೇರಿಯ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ನಗರದ ಚರ್ಚ್ ರಸ್ತೆಯಲ್ಲಿ ಸಂಭವಿಸಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಚ್ಚಲು ಗ್ರಾಮದ ಪ್ರದೀಪ(೨೯) ಎಂದು ಗುರ್ತಿಸಲಾಗಿದೆ. ಈತ ಈತ ಕೆಲವಾರು ಚಟಿಗಳಿಗೆ ಒಳಗಾಗಿ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಸಾಲ ಮಾಡಿರುವುದಾಗಿ ತಿಳಿದುಬಂದಿದೆ, ಕೆಲವು ಪ್ರಕರಣಗಳಲ್ಲಿ ಠಾಣೆಯಲ್ಲಿಯೇ ತೀರ್ಮಾನ ಮಾಡಿದ್ದರೂ ಸಾಲದ ಬಾದಧೆ ಸಹಿಸಲಾರದೆ ಚರ್ಚ್ ರಸ್ತೆಯ ಕರುಣಾಕರನ್ ರವರ ಹನಿಡ್ಯೂಸ್ ಮನೆಯಲ್ಲಿ ಕೊರಿಯರ್ ಏಜೆನ್ಸಿ ನಡೆಸುತ್ತಿದ್ದ ಕಚೇರಿಯಲ್ಲಿಯೇ ರಾತ್ರಿ ನೇಣು ಬಿಗಿದುಕೊಂಡಿದ್ದಾನೆ.

ಮೃತನ ತಂದೆ ಮಾವತೂರೇಗೌಡ ನೀಡಿದ ಮೇರೆಗೆ ನಗರದ ಪೋಲೀಸ್ ಠಾಣಾ ಅಧಿಕಾರಿ ಉಷಾನಂದಿನಿ ಭೇಟಿ ನೀಡಿ ಪರಿಶೀಲಿಸಿ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button