ನಕಲಿ ಚಿನ್ನ ಮಾರಾಟ; ಆರೋಪಿಗಳು ಪೊಲೀಸರ ಬಲೆಗೆ

ಮಡಿಕೇರಿ: ಜಿಲ್ಲೆಯ ನಾಪೋಕ್ಲುವಿನಲ್ಲಿ ನಕಲಿ ಚಿನ್ನವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿತರ ಬಂಧನವಾಗಿದೆ
ನಾಪೂಕ್ಲುವಿನ ನಂದಿ ಚಿನ್ನದ ಅಂಗಡಿಗೆ ನಕಲಿ ಚಿನ್ನವನ್ನು ಕಲಬೆರಕೆ ಮಾಡಿ ಚಿನ್ನದ ಸರವನ್ನು ಗಿರಿವಿ ಇಡಲು ಕಾರಿನಲ್ಲಿ ಮೂರು ಜನರು ಗಿರಾಕಿಗಳ ಸೋಲಿನಲ್ಲಿ ಚಿನ್ನ ಅಡವಿಡಲು ಬಂದಿದ್ದರು.
ಚಿನ್ನದ ಅಂಗಡಿಗೆ ಬಂದ ಮೂವರು ತಮ್ಮ ಬಳಿ ಇದ್ದ ಚಿನ್ನವನ್ನು ಗಿರವಿ ಇಟ್ಟು ಮಾಲಿಕನಿಂದ ಮುಂಗಡವಾಗಿ 20.000/- ಹಣವನ್ನು ಪಡೆದು ಪಡೆದು ತೆರಳಿದ್ದಾರೆ.
ಈ ಸಮಯದಲ್ಲಿ ಅಂಗಡಿ ಮಾಲಿಕನು ಅನುಮಾನುಗೊಂಡು ಚಿನ್ನದ ಸರವನ್ನು ಪರೀಕ್ಷಿಸಿದಾಗ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಕಲಬೆರಕೆ ಮಾಡಿರುವುದು ಕಂಡು ಬಂದಿದೆ.
ಮೋಸ ಹೋದ ಮಾಲಿಕರು ನಾಪೂಕ್ಲು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, 24 ಗಂಟೆಯ ಒಳಗೆ ಯಶಸ್ವಿಯಾಗಿ ಒಬ್ಬರು ಸ್ಥಳೀಯ ಮತ್ತು ಇಬ್ಬರು ಅಪರಿಚಿತ ಆರೋಪಿಗಳನ್ನು ಪತ್ತೆಮಾಡಿ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹೊಂಡ ಅಮೇಜಾನ್ ಕಾರು, ಹಾಗು ಅಂದಾಜು 1,20,000/- ಬೆಲೆಯ ಬಾಳುವ ಚಿನ್ನವನ್ನು ವಶ ಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಸಾರ್ವಜನಿಕರು ಅಪರಿಚಿತರಿಂದ ಯಾವುದೇ ರೀತಿಯ ಚಿನ್ನಾಭರಣಗಳನ್ನು ಖರೀದಿಸಬಾರದು ಹಾಗೂ ನಕಲಿ ಚಿನ್ನಾಭರಣಗಳ ಮೇಲೆ ಎಚ್ಚರಿಕೆಯಿಂದರಬೇಕರಂದು ಪೊಲಿಸರು ಮನವಿ ಮಾಡಿದ್ದಾರೆ.




