Breaking NewsLatestಕ್ರಿಕೆಟ್ಕ್ರೀಡೆ

ನಾಯಕನಾಗಿ ಕೊಹ್ಲಿ, ಕೋಚ್ ಶಾಸ್ತ್ರಿ ನಿರ್ಗಮನ

ದುಬೈ: ನಮೀಬಿಯಾ ವಿರುದ್ಧ ಜಯ ಗಳಿsuವುದರೊಂದಿಗೆ ಭಾರತ ತಂಡ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದೆ.

ನಾಯಕನಾಗಿ ವಿರಾಟ್ ಕೊಹ್ಲಿ ಕೊನೆಯ ಪಂದ್ಯವನ್ನಾಡಿದರೆ, ರವಿಶಾಸ್ತ್ರಿಗೂ ಕೋಚ್ ಹುದ್ದೆಯಿಂದ ಕೆಳಗಿಳಿದರು.

ನಮೀಬಿಯಾವನ್ನು 132 ರನ್ ಗೆ ಕಟ್ಟಿ ಹಾಕಿದ ಭಾರತ ನಂತರ ರೋಹಿತ್ ಶರ್ಮಾ (56) ಮತ್ತು ಕೆ.ಎಲ್. ರಾಹುಲ್ (54*) ಅವರ ಅರ್ಧಶತಕದ ನೆರವಿನಿಂದ ಸುಲಭ ಜಯ ಗಳಿಸಿತು.
ನನಗೆ ವಯಸ್ಸಾಯಿತು ಮಾನಸಿಕವಾಗಿ ದಣಿದಿದ್ದೇನೆ ಆದರೆ ನಮ್ಮ ಹುಡುಗರು ಮಾನಸಿಕ ಮತ್ತು ದೈಹಿಕವಾಗಿ ದಣಿದಿದ್ದಾರೆ ಎಂದು ನಿರ್ಗಮಿಸುತ್ತಿರುವ ಕೋಚ್ ರವಿಶಾಸ್ತ್ರಿ ಕಳಪೆ ಪ್ರದರ್ಶನಕ್ಕೆ ಕಾರಣ ಹೇಳಿದ್ದಾರೆ.

ಭಾರತದ ಆಟಗಾರರು ಐಪಿಎಲ್ ನಲ್ಲಿ ತೋರುವ ಆಸಕ್ತಿ ದೇಶಕ್ಕಾಗಿ ಆಡುವಾಗ ತೋರುವುದಿಲ್ಲ ಎಂದು ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಹೇಳಿರುವುದು ಭಾರತ ಕ್ರಿಕೆಟ್ ಎತ್ತ ಸಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ಯದೆ.

ಕೊಹ್ಲಿಗೆ ಮೊದಲೇ ಗೊತ್ತಿತ್ತು!

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಕಂಡ ಉತ್ತಮ ನಾಯರಲ್ಲಿ ಒಬ್ಬ. ಕ್ರೀಡಾ ಸ್ಫೂರ್ತಿಗೆ ಮೊದಲ ಪ್ರಾಶಸ್ತ್ಯ ನೀಡುವ ಕ್ರೀಡಾಪಟು. ಇಂಗ್ಲೆಂಡ್ ಪ್ರವಾಸ ಒಂದು ಪಂದ್ಯ ಬಾಕಿ ಇರುವಾಗಲೇ ಐಪಿಎಲ್ ಗಾಗಿ ಮುಗಿಸಲಾಗಿತ್ತು.‌ ಈ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವೆ ಅಸಮಾಧಾನ ಉಂಟಾಗಿತ್ತು. ಬಿಸಿಸಿಐ ಕೊರೋನದ ನಾಟಕವಾಡಿ ಟೆಸ್ಟ್ ರದ್ದುಗೊಳಿಸಿ ದುಬೈ ತಲುಪಿತು.‌ ಇಂಥ ಕ್ರೀಡಾ ಸ್ಫೂರ್ತಿ ಇಲ್ಲದ ನಿರ್ಧಾರಗಳ ಬಗ್ಗೆ ವಿರಾಟ್ ಅಸಮಾಧಾನ ವ್ಯಕ್ತಪಡಿಸಿದ್ದರು. ರವಿಶಾಸ್ತ್ರಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು. ಈ ಕಾರಣಕ್ಕಾಗಿಯೇ ವಿರಾಟ್ ಕಠಿಣ ತೀರ್ಮಾನ ಕೈಗೊಂಡರು ಎಂಬುದು ಬಯಲಾಗದ ಸತ್ಯ. ವಿಶ್ವಕಪ್ ಗೆ ಮುನ್ನವೇ ಅವರು ನಾಯಕತ್ವ ತೊರೆಯುವುದಾಗಿ ಪ್ರಕಟಿಸಿದರು.‌ ಆ ಬಳಿಕ ತಂಡವೂ ಕೂಡ ಸಂಘಟಿತ ಹೋರಾಟ ನೀಡಲಿಲ್ಲ. ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತು ಬೇರೆ ತಂಡಗಳ ಫಲಿತಾಂಶವನ್ನು ಆಧರಿಸಬೇಕಾಯಿತು. ಆಟವಾಡವರ ಕೈಗೆ ಆಡಳಿತ, ಕ್ರೀಡಾ ಸ್ಫೂರ್ತಿ ಇಲ್ಲದ ನಿರ್ಧಾರ ಬರೇ ಹಣವನ್ನಾಧರಿಸಿ ಕೈಗೊಳ್ಳುವ ತೀರ್ಮಾನ ಇವುಗಳಿಂದಾಗಿ ಭಾರತ ಕ್ರಿಕೆಟ್ ಹಿನ್ನಡೆಯ ಹೆಜ್ಜೆ ಇಟ್ಟಿದೆ.

Spread the love

Related Articles

Leave a Reply

Your email address will not be published. Required fields are marked *

Back to top button