
ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಷ್ಟ್ರಪತಿಗಳು ಇಂದು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಾಧಕರಿಗೆ ರಾಷ್ಟ್ರಪತಿ ರಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು.
ಈ ವರ್ಷ 119 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಲ್ಲಿ 7 ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಗಳು ಇವೆ.
ರಾಜ್ಯದಿಂದ ಸಮಾಜಸೇವಕ ಅಕ್ಷರ ಸಂತ ಹರೇಕಳ ಹಾಜಬ್ಬಿ, ಪರಸರಪ್ರೇಮಿ ತುಳಸಿ ಗೋವಿಂದೇಗೌಡರಿಗೆ ಹಾಗೂ ಮಾಜಿ ಹಾಕಿಪಟು ಎಂಪಿ ಪ್ರಕಾಶ್, ಮಾತಾ ಬಿ. ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್, ಕೆ. ವೈ. ವೆಂಕಟೇಶ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಜಪಾನ್ನ ಮಾಜಿ ಪ್ರಧಾನಿ ಶಿಂಬೊ ಅಬೆ, ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದ ಸಾಧಕರು.
ಬ್ಯಾಂಡ್ಮಿಟನ್ ಆಟಗಾರ್ತಿ ಪಿ. ವಿ. ಸಿಂಧು, ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ನಿವೃತ್ತ ಏರ್ ಮಾರ್ಷಲ್ ಡಾ. ಪದ್ಮಾ ಬಂಡೋಪಾದ್ಯಾಯ, ಹಿಂದೂಸ್ತಾನಿ ಗಾಯಕ ಚಾನುಲಾಲ್ ಮಿಶ್ರಾ, ಬಾಲಿವುಡ್ ನಟಿ ಕಂಗನಾ ರನೌಟ್ ಸೇರಿದಂತೆ ಹಲವು ಪ್ರಶಸ್ತಿ ಸ್ವೀಕರಿಸಿದರು.
ಮರಣೋತ್ತರವಾಗಿ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಜಾರ್ಜ್ ಫರ್ನಾಂಡೀಸ್ಗೆ ಪ್ರಶಸ್ತಿ ನೀಡಲಾಯಿತು.



