Latestಜಿಲ್ಲಾ ಸುದ್ದಿಬೆಳಗಾವಿ

ನೆರೆ ಪರಿಹಾರಕ್ಕಾಗಿ ತಹಸೀಲ್ದಾರ ಕಚೇರಿ ಎದುರು ಅಡುಗೆ ತಯಾರಿಸಿ ಅಹೋ ರಾತ್ರಿ ಧರಣಿ ಆರಂಭಿಸಿದ ಸಂತ್ರಸ್ತರು

ಬೆಳಗಾವಿ: ಇತ್ತೀಚೆಗೆ ಉಂಟಾದ ಪ್ರವಾಹ ಸಂದರ್ಭದಲ್ಲಿ ಮನೆ ಹಾಗೂ ಬೆಳೆ ಕಳೆದುಕೊಂಡಿರುವ ಬಗ್ಗೆ ಯಾವದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ನಮ್ಮ ಬೇಡಿಕೆಗೆಗಳಿಗೆ ಸ್ಪಂಧಿಸುತ್ತಿಲ್ಲ. ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಹುಕ್ಕಾರಿ ತಾಲೂಕಿನ ಅರ್ಜುನವಾಡ ಗ್ರಾಮದ ನೆರೆ ಸಂತ್ರಸ್ತರು ಹುಕ್ಕೇರಿ ತಹಶೀಲ್ದಾರ್ ಕಚೇರಿ ಮುಂದೆ ಅಡುಗೆ ತಯಾರಿಸಿ, ಊಟ ಮಾಡುವ ಮೂಲಕ ಹಗಲು ರಾತ್ರಿ ಧರಣಿಯನ್ನು ಆರಂಭಿಸಿದ್ದಾರೆ.

ಇತ್ತಿಚೆಗೆ ಸುರಿದ ಮಳೆಯಿಂದಾಗಿ ಹುಕ್ಕೇರಿ ತಾಲೂಕಿನ ಅರ್ಜುವಾಡ ಗ್ರಾಮದಲ್ಲಿ ಪ್ರವಾಹದಲ್ಲಿ ಮನೆ, ಆಸ್ತಿ, ಬೆಳೆ ಕಳೆದುಕೊಂಡಿರುವ ಅರ್ಜುವಾಡ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಯಾವ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳು ಆಲಿಸುತ್ತಿಲ್ಲ. ಎಂದು ದೂರಿ ಸಫಮವಾರ ಬೆಳಿಗ್ಗೆಯಿಂದ ಅಹೋರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಂಡರು. ಒಂದು ಕಡೆಯಲ್ಲಿ ಪ್ರತಿಭಟನೆ ಧರಣಿ ನಡೆಸುವವರು ನಡೆಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಪಾತ್ರೆಗಳನ್ನು ತರಿಸುವ ಮೂಲಕ ಹುಕ್ಕೇರಿ ತಹಸಿಲ್ದಾರ ಕಚೇರಿ ಮುಂದೆಯೇ ಅಡುಗೆ ತಯಾರಿ ಮಾಡುವ ಮೂಲಕ ಊಟ ಮಾಡಿ ತಮ್ಮ ಧರಣಿ ಸತ್ಯಾಗ್ರಹವನ್ನು ಮುಂದೆವರೆಸಿದ್ದಾರೆ.

ತಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೆ ತಾವು ಈ ಕೈಬಿಡುವದಿಲ್ಲ. ರಾತ್ರಿ ಹಗಲು ಎನ್ನದೆ ಪ್ರತಿಭಟನೆ ಈಡೇರಿಬದ ಬಳಿಕವೇ ಇಲ್ಲಿಂದ ಜಾಗ ಖಾಲಿ ಮಾಡುತ್ತವೇ ಎಂದು ಗ್ರಾಮಸ್ಥರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button