ಹುಬ್ಬಳ್ಳಿ – ಧಾರವಾಡದಲ್ಲಿ ಭಾರತ ಬಂದ್‌ಗೆ ನಿರಸ ಪ್ರತಿಕ್ರಿಯೆ: ಧಾರವಾಡದಲ್ಲಿ ಬೀದಿಗಿಳಿದ ಸಂಘಟನೆಗಳು

ಧಾರವಾಡ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಇಂದು ಸಂಯುಕ್ತ ಕಿಸಾನ್ ಮೋರ್ಚಾ, ಸೇರಿದಂತೆ ರೈತ ಪರ ಹಾಗೂ ಕಾರ್ಮಿಕ ಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‌ಗೆ, ಹುಬ್ಬಳ್ಳಿ – ಧಾರವಾಡ ಅವಳಿ ನಗರದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಪ್ರತಿನಿತ್ಯದಂತೆ ಸಾರಿಗೆ ಸಂಚಾರ ಹಾಗೂ ವ್ಯಾಪಾರ ವಹಿವಾಟು ಆರಂಭವಾಗಿದ್ದು, ಮುಂಜಾನೆಯಿಂದ ಯಾವುದೇ ಪ್ರತಿಭಟನೆ ಕಂಡುಬರುತ್ತಿಲ್ಲ. ಇನ್ನೂ ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ರೈತ ಹಾಗೂ ಕಾರ್ಮಿಕ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ.
ಬೆಳ್ಳಂಬೆಳಗ್ಗೆ ಬೀದಿಗೆ ಇಳಿದ ರೈತ ಹಾಗೂ ಕಾರ್ಮಿಕ ಸಂಘಟನೆಗಳು:
ಧಾರವಾಡದಲ್ಲಿ ಭಾರತ್ ಬಂದ್‌ಗೆ ಬೆಂಬಲಿಸಿ ರೈತ ಪರ ಹಾಗೂ ಕಾರ್ಮಿಕ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡಸುತ್ತಿವೆ. ಕೆಂದ್ರ ಸರ್ಕಾರದ ಧಿಕ್ಕಾರ ಕೂಗುವ ಮೂಲಕ, ಮೂರು ಕಾಯ್ದೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತುವೆ.
ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ರೈತ ಪರ ಸಂಘಟನೆಗಳು ಬಸ್ ತಡೆದು ತಮ್ಮ ಅಕ್ರೋಶವನ್ನು ಹೊರಹಾಕಿದರು. ಈ ವೇಳೆ ರೈತರು ಹಾಗೂ ಕಾರ್ಮಿಕ ಮುಖಂಡರು ಮತ್ತು ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾಕರ ಕೂಗಿದರು. ಸರ್ಕಾರ ಜಾರಿಗೆ ತಂದಿರುವ ಮಸೂದೆಗಳು ರೈತರ ಮರಣ ಶಾಸನಗಳಾಗಿವೆ ಎನ್ನುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಇದೆ ವೇಳೆ ರೈತರೊಬ್ಬರೂ ನಡುರಸ್ತೆಯಲ್ಲೇ ಆಟೋ ಚಾಲಕನೊಬ್ಬನನ್ನು ತಡೆದು, ಚಾಲಕನ ಕಾಲಿಗೆ ಬಿದ್ದು, ಜನಸಾಮಾನ್ಯರ ಜನಪರ ಹೋರಾಟವಾಗಿದೆ ರೈತ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿಕೊಂಡರು.
ಹುಬ್ಬಳ್ಳಿಯಲ್ಲಿ ಕಾಣದ ಪ್ರತಿಭಟನೆ ಕಾವು:
ಇನ್ನೂ ಧಾರವಾಡದಲ್ಲಿ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಬೆಳ್ಳಂಬೆಳಗ್ಗೆ ಪ್ರತಿಭಟನೆಗೆ ಮುಂದಾಗಿದ್ದು, ಆದರೆ ಹುಬ್ಬಳ್ಳಿಯಲ್ಲಿ ಯಾದೊಂದು ಸಂಘಟನೆಯ ಪ್ರತಿಭಟನೆ ಕಂಡು ಬಂದಿಲ್ಲ. ಮುಂಜಾನೆ ಹುಬ್ಬಳ್ಳಿಯ ಹೃದಯ ಭಾಗವಾಗಿರುವ ಚೆನ್ನಮ್ಮ ವೃತದಲ್ಲಿ ಎಲ್ಲವು ಪ್ರತಿನಿತ್ಯದಂತೆ ನಡೆದುಕೊಂಡು ಹೋಗುತ್ತಿದ್ದು, ಸಾರಿಗೆ ಸಂಚಾರ ಹಾಗೂ ವ್ಯಾಪಾರ ವಹಿವಾಟು ದಿನ ನಿತ್ಯದಂತೆ ನಡೆದುಕೊಂಡು ಹೋಗುತ್ತಿದೆ.
ಹತ್ತು ಗಂಟೆಯ ನಂತರ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕೇವಲ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡಿದ್ದು, ನಗರ ಇಂದಿರಾ ಗಾಜಿ ಮನೆಯಿಂದ ಪ್ರತಿಭಟನೆಯ ಮೂಲಕ ಮಿನಿ ವಿಧಾನಸೌಧವರೆಗೂ ಆಗಮಿಸಿ ಮನವಿ ಸಲ್ಲಿಸಲು ತೀರ್ಮಾಣ ಕೈಗೊಂಡಿವೆ. ಹಾಗಾಗಿ ಭಾರತ ಬಂದ್‌ಗೆ ಹುಬ್ಬಳ್ಳಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಭಾರತ ಬಂದಗೆ ಧಾರವಾಡದ ಜುಬ್ಲಿ ವೃತದಲ್ಲಿ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನಗರದಲ್ಲಿ ಸಾರಿಗೆ ಸಂಚಾರ ಹಾಗೂ ವ್ಯಾಪಾರ ವಹಿವಾಟು ದಿನ ನಿತ್ಯದಂತೆ ಸಾಗಿದೆ. ಇನ್ನೂ ಹುಬ್ಬಳ್ಳಿಯಲ್ಲೂ ಕೂಡಾ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತಿವಾಗಿದ್ದು, ಸಾರ್ವಜನಿಕರು ನಿತ್ಯದಂತೆ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.




