ಮನರಂಜನೆಸಿನಿಮಾಸೆಲೆಬ್ರಿಟಿ
‘ಸೂರರೈ ಪೊಟ್ರು’ ಚಿತ್ರದ ಹಿಂದಿ ರಿಮೇಕ್ ನ ತಡೆಯಾಜ್ಞೆಯನ್ನು ರದ್ದುಗೊಳಿಸಿದ ಕೋರ್ಟ್

ಈ ವರ್ಷದ ಆರಂಭದಲ್ಲಿ ಸುಧಾ ಕೊಂಗರಾ ನಿರ್ದೇಶನದ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವುದಾಗಿ ದೃಢಪಡಿಸಲಾಯಿತು. ಆದರೆ ಸೂರ್ಯನ 2 ಡಿ ಎಂಟರ್ ಟೈನ್ ಮೆಂಟ್ ನೊಂದಿಗೆ ತಮಿಳಿನಲ್ಲಿ ಚಿತ್ರವನ್ನು ನಿರ್ಮಿಸಿದ ಗುನಿತ್ ಮೊಂಗಾ ಅವರ ಸಿಖ್ಯಾ ಎಂಟರ್ ಟೈನ್ ಮೆಂಟ್ ರಿಮೇಕ್ ತಡೆಯೊಡ್ಡಿ ಕೋರ್ಟ್ ಮೆಟ್ಟಿಲೇರಿದೆ.
ಈ ಪ್ರಕರಣವು ಸೆಪ್ಟೆಂಬರ್ 8ರಂದು ವಿಚಾರಣೆ ನಡೆಸಿದ ಕೋರ್ಟ್ ಸಿಖ್ಯಾ ಎಂಟರ್ ಟೈನ್ ಮೆಂಟ್ ನೀಡಿದ ತಡೆಯಾಜ್ಞೆಯನ್ನು ರದ್ದುಗೊಳಿಸಿ, ಹಿಂದಿ ರಿಮೇಕ್ ಗೆ ಒಪ್ಪಿಗೆ ನೀಡಿದೆ. ಹಾಗಾಗಿ 2 ಡಿ ಎಂಟರ್ ಟೈನ್ ಮೆಂಟ್ ಮತ್ತು ಅಬುಂಡಾಂಟಿಯಾ ಎಂಟರ್ ಟೈನ್ ಮೆಂಟ್ ಚಿತ್ರದ ರಿಮೇಕ್ ಗೆ ಮುಂದಾಗಿದೆ ಎನ್ನಲಾಗಿದೆ.
ಏರ್ ಡೆಕ್ಕನ್ ಸಂಸ್ಥಾಪಕ ಜಿ ಆರ್ ಗೋಪಿನಾಥ್ ಜೀವನ ಕಥೆಯನ್ನು ಆಧರಿಸಿದ ಸೂರರೈ ಪೊಟ್ರು ಚಿತ್ರದ ಪೂರ್ವ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗುವ ನಿರೀಕ್ಷೆ ಇದೆ. ಹಿಂದಿಯಲ್ಲಿ ಸೂರ್ಯ ಅವರ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ.




