ಅಂಗವಿಕಲ ಮಹಿಳೆಯನ್ನು ಮದುವೆಯಾಗಿ ಹಣ ದೋಚಿ ಪರಾರಿಯಾದ ಮೌಲ್ವಿ

ಕಾರವಾರ : ಅಂಗವಿಕಲ ಮಹಿಳೆಯನ್ನು ನಂಬಿಸಿ ಮದುವೆಯಾಗಿ ನಂತರ ಆಕೆಯ ಬಳಿ ಇದ್ದ ಹಣ ದೋಚಿ ದರ್ಗಾದಲ್ಲಿ ಇರುವ ಮೌಲ್ವಿ ಪಲಾಯನ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ನಡೆದಿದೆ.
ದಾಸನಕೊಪ್ಪದ ಖುರೇಷಿ ಮಕ್ಬುಲ್ ಸಾಬ್ ದರ್ಗಾದ ಮೌಲ್ವಿಯಿಂದ ವಂಚನೆಗೊಳಗಾದ ಮಹಿಳೆಯಾಗಿದ್ದಾಳೆ. ಉತ್ತರ ಪ್ರದೇಶ ಮೂಲದ ಸದರಿ ಬನವಾಸಿಯ ದಾಸನಕೊಪ್ಪ ದರ್ಗಾದಲ್ಲಿ ಮೌಲ್ವಿಯಾಗಿರುವ ಮಹ್ಮದ್ ಜಾಕೀರ್ (28 ) ವಂಚನೆ ಮಾಡಿದವನಾಗಿದ್ದಾನೆ.
ವಂಚನೆಗೊಳಗಾದ ಮಹಿಳೆಯು ಅಂಗವಿಕಲೆಯಾಗಿದ್ದು,ಈ ಹಿಂದೆ ಮದುವೆಯಾಗಿ ಹತ್ತು ವರ್ಷದ ಮಗನಿದ್ದಾನೆ.ಗಂಡ ಬಿಟ್ಟು ಹೋದ್ದರಿಂದ ಸಣ್ಣಪುಟ್ಟ ಕೆಲಸ ಮಾಡಿಕೊಂಡು ದರ್ಗಾದ ಬಳಿಯೇ ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದ ಈ ಮಹಿಳೆಯನ್ನು ಪರಿಚಯ ಮಾಡಿಕೊಂಡು ಈಕೆಗೆ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿದ್ದಾನೆ. ಕೆಲವು ತಿಂಗಳವರೆಗೆ ಈಕೆಯೊಂದಿಗೆ ಜೀವನ ನಡೆಸಿ ಈಕೆಯ ಮನೆಯಲ್ಲಿದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲವನ್ನೂ ದೋಚಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಂಚನೆಗೊಳಗಾದ ಮಹಿಳೆ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ




